ಮಾಜಿ ಸಿಎಂ ಯಡಿಯೂರಪ್ಪ ನಂತರ ಸಚಿವ ಸುಧಾಕರ್ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ

ನೈಜ ಘಟನೆಯಾಧಾರಿತ ತನುಜಾ ಸಿನಿಮಾದಲ್ಲಿ ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿ ದೇಶದಾದ್ಯಂತ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಪಡೆದಿದ್ದಾರೆ. ಇದನ್ನೂ ಓದಿ : ಉಪೇಂದ್ರ ಮೆಚ್ಚಿಕೊಂಡ ಓ ಮೈ ಲವ್ ಸಾಂಗ್

ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ , ಸಚಿವ  ಡಾ.ಕೆ ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಇನ್ನಿತರ ಸಹಾಯದಿಂದ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಪಡೆದಿದ್ದು ಎಲ್ಲರ ಹುಬ್ಬೇರಿಸಿತ್ತು, ಅಷ್ಟೇ ಅಲ್ಲದೆ ಆ ನೈಜ ಘಟನೆಯಾಧಾರಿತ ವರದಿ ಆಧರಿಸಿ  ಸಿನಿಮಾ ಕೂಡ ಸೆಟ್ಟೇರಿದ್ದು ಆ ಸಿನಿಮಾಗೆ ತನುಜಾ ಎಂದು ನಾಮಕರಣ ಮಾಡಿದ್ದರು . ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ  ತಮ್ಮ ಪಾತ್ರಕ್ಕೆ ತಾವೇ  ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಸಚಿವರಾದ ಡಾ.ಕೆ ಸುಧಾಕರ್ ಅವರು ಕೂಡ ಇಂದು ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನುಭವಿ ಕಲಾವಿದರ ರೀತಿ ತಮ್ಮ ಪಾತ್ರಕ್ಕೆ ನ್ಯಾಯ  ಒದಗಿಸಿದ್ದು ಅದ್ಭುತವಾಗಿ ನಟಿಸಿದ್ದಾರೆ ಜೊತೆಗೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ವಿಶೇಷವಾಗಿದ್ದು ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

ಇನ್ನು ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನವಿದೆ. ಈ ಚಿತ್ರವು ಶಿವಮೊಗ್ಗ ಸುತ್ತ ಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

ತಾರಾಗಣದಲ್ಲಿ ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್ ,  ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಅಭಿನಯಿಸಿದ್ದಾರೆ.

Comments

Leave a Reply

Your email address will not be published. Required fields are marked *