ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳೋದೇ ಕಷ್ಟ ಇದೆ, ಸಿಎಂ ಬದಲಾವಣೆ ಬಗ್ಗೆ ನಾವೇನ್ ಹೇಳೋದು? – ಸತೀಶ್ ಜಾರಕಿಹೊಳಿ

ಬಳ್ಳಾರಿ: ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳೋದು ಕಷ್ಟ ಆಗಿದೆ. ಸಿಎಂ ಬದಲಾವಣೆ ಆಗ್ತಾರೆ ಅಂದ್ರೆ ನಾವೇನು ಹೇಳೋದು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವನ್ನು ಬೆಂಗಳೂರಿಗೆ (Bengaluru) ಬಂದು ಕೇಳಿ. ಹೊಸಪೇಟೆಯಲ್ಲಿ ಕುಳಿತು ಏನು ಹೇಳೋಕಾಗೋಲ್ಲ‌. ನೀವು ಬೆಂಗಳೂರಿಗೆ ಬಂದ್ರೆ ನಾನೇ ಸಿಎಂ ಭೇಟಿ ಮಾಡಿಸ್ತೀನಿ. ಅವರ ಬಳಿಯೇ ಕೇಳಿ ಎಂದಿದ್ದಾರೆ. ಇದನ್ನೂ ಓದಿ: ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಅನರ್ಹ ಫಲಾನುಭವಿಗಳಿಗೆ ಕೋಕ್‌ ನೀಡಲು ಮುಂದಾದ ಸರ್ಕಾರ

ದಲಿತ ಸಚಿವರು‌ ಶಾಸಕರ ಸಭೆಯನ್ನು ಮುಂದೆನೂ ಮಾಡ್ತೀವಿ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಏನು ಸಂಬಂಧವಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮುಗಿದು ಹೋದ ಅಧ್ಯಾಯ. ಅದು ಬಂದಾಗ ನೋಡೋಣ. ಸಚಿವ ಸಂಪುಟ ವಿಸ್ತರಣೆ ಮಾಡೋದ್ರ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೆ. ಹೊಸದಾಗಿ ಬಂದ ಶಾಸಕರಿಗೆ ಸಚಿವ‌ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ. ನಮ್ಮ ಪ್ರಕಾರ ಯಾರು ಇಲ್ಲ ನೀವು ಬೇಕಾದ್ರೆ ಬೆಂಗಳೂರು- ಡೆಲ್ಲಿಗೆ ಹೋಗಿ ಕೇಳಿ ಎಂದಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಚಾರವಾಗಿ, ಆಯಾ ಘಟನೆ ಆದಾಗ ಕಾನೂನು‌ ಕಾಪಾಡುತ್ತಾರೆ. ಕೆಲವೊಂದು ಸಲ ಪೊಲೀಸರು ಮುಂಜಾಗೃತಾ ಕ್ರಮಕೈಗೊಂಡಿರುತ್ತಾರೆ. ಕೈ ಮೀರಿ ಒಮ್ಮೊಮ್ಮೆ ಕೆಲವು ಘಟನೆಗಳು ನಡೆಯುತ್ತವೆ. ಪೊಲೀಸರು ಆ ಕುರಿತು ಕ್ರಮಕೈಗೊಳ್ತಾರೆ. ಈಗಾಗಲೇ ಕಮಿಷನರ್ ಅಮಾನತ್ತಿಗೆ ಸಂಬಂಧಿಸಿದಂತೆ ತನಿಖೆ ನಡೀತಾ ಇದೆ. ವರದಿ ಬಂದ್ಮೇಲೆ ಸರ್ಕಾರ ಕ್ರಮವಹಿಸುತ್ತೆ. ಕಾಲ್ತುಳಿತ ಪ್ರಕರಣವನ್ನು ಡಿಸಿ ಅವ್ರ ನೇತೃತ್ವದಲ್ಲಿ ತನಿಖೆ ನಡೆಸಲಾಗ್ತಿದೆ. ಸಿಐಡಿ (CID) ತನಿಖೆನೂ ನಡೀತಿದೆ. 15 ದಿನಗಳಲ್ಲಿ ವರದಿ ಬರಲಿದೆ. ಆದಾದ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿ ದಯಾನಂದ್ ಅವರನ್ನು ಮರುನೇಮಕ ಮಾಡುವುದರ ಬಗ್ಗೆ ಸಿಎಂ ನಿರ್ಣಯ ತೆಗೆದುಕೊಳ್ತಾರೆ. ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಅಸೋಸಿಯೇಷನ್ ಹಾಗೂ ಜನರದ್ದು ಸೇರಿ ಎಲ್ಲರದ್ದೂ ತಪ್ಪಿದೆ ಎಂದಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ನೀರುಪಾಲು