ಕೋಟೆನಾಡಲ್ಲಿ ತಡರಾತ್ರಿ ಅಶೋಕ್ ಸಿಟಿರೌಂಡ್ಸ್

– ಕಲ್ಲಿನ ಕೋಟೆ ಹಾಡು ಹೇಳಿದ ಸಚಿವ

ಚಿತ್ರದುರ್ಗ: ಕೋಟೆನಾಡಿನಲ್ಲಿ ಕಂದಾಯ ಸಚಿವ ಆರ್.ಆಶೋಕ್ ತಡರಾತ್ರಿ ಸಿಟಿ ರೌಂಡ್ಸ್ ಹಾಕಿದರು. ಫೋಟೋಗೆ ಪೋಸ್ ನೀಡಿ, ಬಳಿಕ ಓಬವ್ವ ಪ್ರತಿಮೆ ಬಳಿ ಕಲ್ಲಿನ ಕೋಟೆ ಹಾಡು ಹೇಳಿ ಸಹ ಸಂಭ್ರಮಿಸಿದ್ದಾರೆ.

ಜಿಲ್ಲೆಯ ಹೊಸದುರ್ಗದ ನಗರಲ್ಲಿಂದು ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿರುವ ಆರ್.ಅಶೋಕ್ ಅವರು ನಿನ್ನೆ ರಾತ್ರಿ 11:30ರ ಸಮಯದಲ್ಲಿ ನಗರದ ಒನಕೆ ಓಬವ್ವ ವೃತ್ತದ ಬಳಿ ರೌಂಡ್ಸ್ ಹಾಕಿದರು. ಇದೇ ವೇಳೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. ಒನಕೆ ಓಬವ್ವ ಪ್ರತಿಮೆ ಬಳಿ ಚಿತ್ರದುರ್ಗದ ಕಲ್ಲಿನ ಕೋಟೆ ಎಂದು ಒಂದು ಸಾಲು ಹಾಡು ಹೇಳಿ ಸಂಭ್ರಮಿಸಿದರು. ಇದನ್ನೂ ಓದಿ: ಜಿ.ಟಿ.ದೇವೇಗೌಡ ಪಕ್ಷ ತೊರೆದರೆ ಜೆಡಿಎಸ್‍ಗೆ ನಷ್ಟ : ವೈ.ಎಸ್.ವಿ.ದತ್ತ

ಬಳಿಕ ನೈಟ್ ವಾಕ್ ನಡೆಸಿದ ಸಚಿವರು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚಿತ್ರದುರ್ಗ ಜಿಲ್ಲಾಡಳಿತ ಕಟ್ಟಡ ವೀಕ್ಷಿಸಿದರು. ಈ ಕಟ್ಟಡಗಳು ಎಷ್ಟು ಗಟ್ಟಿಯಾಗಿವೆ ಎಂದು ಶಾಸಕ ಗೂಳಿ ಹಟ್ಟಿಶೇಖರ್ ಅವರೊಂದಿಗೆ ಚರ್ಚಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡಿಸಿ ಕಚೇರಿ ಕಟ್ಟಡದಲ್ಲಿರುವ ಕಚೇರಿಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆದರು. ಆಹಾರ ಇಲಾಖೆ, ಎಸಿ ಕಚೇರಿ ಹಾಗೂ ಎಡಿಸಿ ಕಚೇರಿಗಳು ಸಹ ಇಲ್ಲಿವೆ ಎಂದು ಶಾಸಕ ಶೇಖರ್ ತಿಳಿಸಿದರು.

Comments

Leave a Reply

Your email address will not be published. Required fields are marked *