ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಪಕ್ಷಕ್ಕೆ ಬಿ ಟೀಂ ಆಗಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯು ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬಿ ಟೀಂ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರ ಅಸ್ತಿತ್ವ ಉಳಿಸಿಕೊಳ್ಳೋಕೆ ಮೈತ್ರಿ. ಮೋದಿ (Narendra Modi) ಹವಾ ದಕ್ಷಿಣ ಭಾರತದಲ್ಲಿ ಇಲ್ಲ. ಇಲ್ಲಿ ಮೋದಿ ಆಟ ನಡೀತಾ ಇಲ್ಲ. ಜೆಡಿಎಸ್ (JDS) ಬಿ ಟೀಂ ಬಿಜೆಪಿ ಆಗಿದೆ. ಮೂರು ಹುದ್ದೆ ಆಯ್ಕೆ ಮಾಡಕ್ಕಾಗ್ತಿಲ್ಲ ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಕ್ಕೆ ಬಿ ಟೀಂ ಆಗಿದೆ. ಮೈತ್ರಿ ನಂತ್ರ ವಿಪಕ್ಷ ನಾಯಕನ ಆಯ್ಕೆ ಆಗಬಹುದು. ಯಾಕಂದ್ರೆ ಈ ಮೊದಲೇ ಸದನದಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಆಯ್ಕೆ ಯಾರು ಆಗಬಹುದು ಎಂದು ಊಹಿಸಿ. ಸೀಟ್ ಮತ್ತು ಸದನದಲ್ಲೂ ಹೊಂದಾಣಿಕೆ ಇದೆಯಾ ಅನ್ನೋದು ಸಂಶಯ ಎಂದಿದ್ದಾರೆ.

ಆಪರೇಷನ್ ಹಸ್ತದ ಬಗ್ಗೆ ಮಾತನಾಡಿದ ಅವರು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಯಾರನ್ನೂ ಕರೆದುಕೊಳ್ಳಲ್ಲ ಅಂತಾ ಮೊದಲೇ ಹೇಳಿದ್ರು. ಅದೇ ರೀತಿ ನಾವು ಯಾರನ್ನೂ ಕರೆದುಕೊಳ್ಳಲಿಲ್ಲ. ನಾವು ಯಾರನ್ನೂ ಖರೀದಿ ಮಾಡಿಲ್ಲ. ಅವರೇ ಬರ್ತಾರೆ ಅಂದ್ರೆ ಸ್ವಾಗತ ನಾವು ಸಮೃದ್ಧ ಕರ್ನಾಟಕ ಚಿಂತನೆಯಲ್ಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಓಲಾ, ಊಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಡಿಕೆಶಿ

ಬಿ.ಕೆ ಹರಿಪ್ರಸಾದ್ (BK Hariprasad) ಸಿಎಂಗೆ ಬೈದ ವಿಚಾರ ಹರಿಪ್ರಸಾದ್ ಹೈ ಕಮ್ಯಾಂಡ್ ಜೊತೆ ಮಾತನಾಡಬೇಕಿತ್ತು. ಹೇಳಿಕೆ ನನಗೆ ಗೊತ್ತಿಲ್ಲ ಸಮಾಜದ ಪರ ಹೋರಾಟ ಮಾಡೋದ್ರಲ್ಲಿ ತಪ್ಪಿಲ್ಲ. ಚೌಕಟ್ಟಿನೊಳಗೆ ಮಾತಾಡೋದು ಒಳ್ಳೆದು. ಅವರು ಎಲ್ಲೂ ಕೂಡ ಸಿಎಂ ಹೆಸರು ಬಳಸಿಲ್ಲ. ಅನಾವಶ್ಯಕ ಗೊಂದಲ ಸೃಷ್ಟಿಸೋದು ಬೇಡ. ಬಿಕೆ ಹರಿಪ್ರಸಾದ್ ಎಲ್ಲಿಯೂ ಕೂಡ ಸಿದ್ದರಾಮಯ್ಯ ಹೆಸರು ಹೇಳಿಲ್ಲ. ಸಿಎಂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ.

ಹರಿಪ್ರಸಾದ್‌ಗೆ ಎಐಸಿಸಿ ಎಲ್ಲ ನಾಯಕರೂ ಗೊತ್ತಿದ್ದಾರೆ. ಏನೇ ಇದ್ದರೂ ಅವರು ಮತ್ತು ನಾಯಕರು ಮಾತನಾಡಿಕೊಳ್ತಾರೆ. ಸಮಾಜದ ಪರ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ. ಯಾವುದೇ ರೀತಿಯ ಗೊಂದಲಗಳಿಲ್ಲ. ಇರುವುದು ಕೆಲವೇ ಸ್ಥಾನಗಳು ಹೀಗಾಗಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ಇರೋದು ಒಂದೇ ಸಿಎಂ ಸ್ಥಾನ ಎಂದಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]