ಎಸಿ ಕಾರು ಸೈಡಿಗಿಟ್ಟು ಸರ್ಕಾರಿ ಬಸ್ ಹತ್ತಿದ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಶಾಸಕರು-ಮಂತ್ರಿಗಳಂದ್ರೆ ವಿಮಾನ, ಹೆಲಿಕಾಫ್ಟರಲ್ಲೇ ಓಡಾಡೋದು. ಜಿಲ್ಲೆಯೊಳಗೆ ಎಸಿ ಕಾರಲ್ಲಿ ಕಾರ್ಯಕ್ರಮಗಳಿಗೆ ಹೋಗುವುದು ಸಾಮನ್ಯ. ಆದ್ರೆ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇವತ್ತು ಸರ್ಕಾರಿ ಕಾರು ಸೈಡಿಗಿಟ್ಟು ಸರ್ಕಾರಿ ಬಸ್ ಹತ್ತಿ ತಮ್ಮ ಪ್ರಯಾಣ ಬೆಳೆಸಿದರು.

ಸದಾ ಎಸಿ ಕಾರಿನಲ್ಲೇ ಓಡಾಡುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ತಮ್ಮ ಕಾರನ್ನು ಬಿಟ್ಟು ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ತಮ್ಮ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ವಿಭಾಗದಲ್ಲಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಇನ್ನಿತರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು.

ಬೆಳಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅಜ್ಜರಕಾಡಿನಲ್ಲಿ ಆಯೋಜಿಸಿದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಬಳಿಕ ಬಸ್ಸಿನಲ್ಲಿ ತಮ್ಮ ಕಾರ್ಯಕರ್ತರೊಡನೆ ಬ್ರಹ್ಮಾವರದತ್ತ ಪ್ರಯಾಣ ಬೆಳೆಸಿದರು. ಉಡುಪಿಯಿಂದ ಬ್ರಹ್ಮಾವರ 15 ಕಿಮೀ ದೂರವಿದ್ದು, ಅಲ್ಲಿನ ಎಲ್ಲಾ ಕಾರ್ಯಕ್ರಮಕ್ಕೂ ಬಸ್ಸನ್ನೇ ಅವಲಂಬಿಸಿದರು.

ಇದನ್ನೂ ಓದಿ: ಬಸ್ ಡ್ರೈವರ್ ಆದ ಸಚಿವ ವಿನಯ ಕುಲಕರ್ಣಿ

ಜನ ಸಾಮಾನ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಉದ್ದೇಶದ ಜೊತೆ ನರ್ಮ್ ಬಸ್ ಯಾವ ರೀತಿಯ ಸೇವೆಯನ್ನು ಕೊಡುತ್ತಿದೆ ಎಂಬೂದನ್ನೂ ತಿಳ್ಕೋಬೇಕು ಎಂಬ ಉದ್ದೇಶದಿಂದ ಬಸ್ಸಲ್ಲಿ ಪ್ರಯಾಣಿಸಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸರ್ಕಾರಿ ಬಸ್ ಓಡಿಸುವ ಯೋಜನೆಯಿದೆ ಎಂದು ಸಚಿವ ಮಧ್ವರಾಜ್ ಈ ಸಂದರ್ಭದಲ್ಲಿ ಹೇಳಿದರು.

Comments

Leave a Reply

Your email address will not be published. Required fields are marked *