ಡಿಕೆಶಿಯದ್ದು ಏಸುಕ್ರಿಸ್ತನ ನಿಷ್ಠೆ ಅಲ್ಲ, ಸೋನಿಯಾ ನಿಷ್ಠೆ: ಪ್ರಹ್ಲಾದ್ ಜೋಷಿ

ಗದಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರದ್ದು ಏಸುಕ್ರಿಸ್ತನ ನಿಷ್ಠೆ ಅಲ್ಲ, ಅದು ಸೋನಿಯಾ ಗಾಂಧಿ ನಿಷ್ಠೆ. ವಿರೋಧ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾಗಾಂಧಿ ಮನವೊಲಿಸಲು ಹೀಗೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಅವರಿಗೆ ಏಸು ಒಳ್ಳೆಯದು ಮಾಡಲೆಂದು ಹಾರೈಸುತ್ತೇನೆ ಎಂದರು.

ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೇ ಏಸು ಪ್ರತಿಮೆ ಪ್ರತಿಷ್ಠಾಪನೆ ಮುಂದಾಗಿದ್ದು ತಪ್ಪು. ಹಾಗಾಗಿ ಬಿಜೆಪಿ ಪಕ್ಷ ಆಕ್ಷೇಪ ಮಾಡಿದೆ. ತುಷ್ಟೀಕರಣ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ. ಮುಸ್ಲಿಂ, ಕ್ರಿಶ್ಚಿಯನ್ ಇತರೆ ಯಾವುದೇ ವಿರೋಧಿ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭಾಕರ ಭಟ್ರೇ.. ಕನಕಪುರ, ಬೆಂಗ್ಳೂರವರಾದ್ರೂ ನೆಮ್ಮದಿಯಿಂದ ಇರ್ಲಿ: ಖಾದರ್

ಇದೇ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಕನಕಪುರಕ್ಕೆ ಹೋಗಿ ಯಾಕೆ ಭಾಷಣ ಮಾಡಬೇಕು ಅನ್ನೋ ಯು.ಟಿ ಖಾದರ್ ಹೇಳಿಕೆಗೆ ತಿರುಗೇಟು ನೀಡಿ, ಯು.ಟಿ ಖಾದರವರು ಸಹ ಬೇರೆ ಕಡೆ ಹೋಗಿ ಭಾಷಣ ಮಾಡುತ್ತಾರೆ. ಪೌರತ್ವ ಕಾಯ್ದೆ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಯು.ಟಿ ಖಾದರ್ ಏನು ಬಹಳ ಸಂಪನ್ನ ಅಂತ ಮಾತನಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರು ಎಲ್ಲಿ ಭಾಷಣ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವುದು ಅವರಿಗೆ ಬಿಟ್ಟದ್ದು. ಆಯಾ ಜಿಲ್ಲಾಡಳಿತ ಅದನ್ನ ನಿರ್ಧರಿಸುತ್ತದೆ. ಅದಕ್ಕೆ ವಿರೋಧ ಮಾಡೋಕೆ ಯು.ಟಿ ಖಾದರ್ ಯಾರು ಎಂದು ಸಚಿವರು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *