ಪಶು ಸಂಗೋಪನಾ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿಲ್ಲ: ಪ್ರಭು ಚವ್ಹಾಣ್

ಬೀದರ್: ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಸ್ಟನ್ನಿಂಗ್ ಕಡ್ಡಾಯ ಮಾಡಿದ ಆದೇಶವನ್ನು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಳ್ಳಿ ಹಾಕಿದ್ದಾರೆ.

ಸ್ಟನ್ನಿಂಗ್ ಕಡ್ಡಾಯ ಆದೇಶದ ಕುರಿತಾಗಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸಚಿವರು, ಪಶು ಸಂಗೋಪನಾ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ನಮ್ಮ ಇಲಾಖೆ ಉಪನಿರ್ದೇಶಕರು (ಡಿಡಿ) ಹಲಾಲ್ ಮಾಡಬಾರದು‌, ಸ್ಟನ್ನಿಂಗ್ ಮಾಡಬೇಕು ಎಂದು ಪತ್ರ ಬರೆದಿದ್ದಾರೆ. 2001 ಕಾಯ್ದೆ ಪ್ರಕಾರ ಹಲಾಲ್ ಮಾಡಬಾರದು, ಸ್ಟನ್ನಿಂಗ್ ಮಾಡಬೇಕು ಎಂದು ಇದೆ ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಕಡ್ಡಾಯ

ನಾನು ಈ ಬಗ್ಗೆ ಸಮಗ್ರವಾದ ಮಾಹಿತಿ ಪಡೆದು ನಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತೇನೆ. ಪಶು ಸಂಗೋಪನಾ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಡಿಡಿ ಪತ್ರ ಬರೆದಿದ್ದಾರೆ ಅಷ್ಟೇ ಎಂದು‌ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಸ್ಟನ್ನಿಂಗ್  ಎಂದರೇನು? ಎಷ್ಟು ವಿಧ?:
`ಸ್ಟನ್ನಿಂಗ್’ ಅಂದ್ರೆ ಪ್ರಾಣಿವಧೆಗೆ ಮೊದಲು ಪ್ರಜ್ಞೆ ತಪ್ಪಿಸುವುದು. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗೆ ಹೆಚ್ಚು ಹಿಂಸೆಯಾಗುವುದಿಲ್ಲ. ಹಾಗಾಗಿ ಇನ್ಮುಂದೆ ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯಗೊಳಿಸಲಾಗಿದ್ದು, ಸ್ಟನ್ನಿಂಗ್ ಇಲ್ಲದಿದ್ದರೆ ಹೊಸ ಅಂಗಡಿಗಳಿಗೆ ಅನುಮತಿ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.

ಸ್ಟನ್ನಿಂಗ್ ಪ್ರಾಣಿವಧೆಯಲ್ಲಿ ಎರಡು ವಿಧಾನಗಳಿದ್ದು, ಪ್ರಜ್ಞೆ ತಪ್ಪಿಸಿ ಪ್ರಾಣಿಗಳ ವಧೆ ಮಾಡುವುದು ಮೊದಲನೇ ವಿಧಾನ. ಮೊದಲನೇ ವಿಧಾನದ ಮೂಲಕ ಪ್ರಾಣಿಯ ತಲೆಗೆ ಬಲವಾಗಿ ಹೊಡೆಯುವುದು. ತಲೆಗೆ ಬಲವಾಗಿ ಹೊಡೆದ್ರೆ ಪ್ರಜ್ಞೆ ತಪ್ಪಲಿದೆ ಅಥವಾ ತಲೆಗೆ ಹೊಡೆದಾಗ ಮೆದುಳು ನಿಷ್ಕ್ರಿಯವಾಗಲಿದೆ. ಈ ವೇಳೆ ರಕ್ತ ಸೋರಿಕೆ ಆಗದಂತೆ ಪ್ರಾಣಿಗಳ ವಧೆ ಮಾಡುವುದಾಗಿದೆ. ಈ ಮೂಲಕ ಪ್ರಾಣಿವಧೆ ಪರಿಣತರಾದವರು ಮಾತ್ರ ಮಾಡಬಹುದುದಾಗಿದೆ. ಇದನ್ನೂ ಓದಿ: RSS, ಬಿಜೆಪಿಯವರಿಗೆ ಯಾರೂ ಹೆದರಬೇಡಿ, ಕಾಂಗ್ರೆಸ್ ನಿಮ್ಮೊಂದಿಗಿದೆ: ಡಿಕೆಶಿ

ಎಲೆಕ್ಟ್ರಿಕ್ ಶಾಕ್ ಕೊಟ್ಟು ಪ್ರಾಣಿಗಳ ವಧೆ ಮಾಡುವುದು ಎರಡನೇ ವಿಧಾನ. ಪ್ರಾಣಿಗಳ ತಲೆಗೆ ಹೊಡೆಯುವ ಬದಲು ಎಲೆಕ್ಟ್ರಿಕ್ ಶಾಕ್ ಕೊಟ್ಟು ಪ್ರಜ್ಞೆ ತಪ್ಪಿಸುವುದು. ಈ ಮೂಲಕ ಪ್ರಾಣಿಗಳು ಹಿಂಸೆ ಅನುಭವಿಸೋ ಬದಲು ಮೂರ್ಛೆ ತಪ್ಪಿಸುವುದಾಗಿದೆ.

Comments

Leave a Reply

Your email address will not be published. Required fields are marked *