ನನ್ನನ್ನು ಸೋಲಿಸಲು ನಿರಾಣಿ 2 ಕೋಟಿ ಖರ್ಚು ಮಾಡಿದ್ದಾರೆ: ಯತ್ನಾಳ್ ಹೊಸ ಬಾಂಬ್

ವಿಜಯಪುರ: ಸ್ವಪಕ್ಷದವರ ವಿರುದ್ಧವೇ ಮಾತನಾಡುವ ಮೂಲಕ ಸದಾ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಈಗ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಹೊಸ ಬಾಂಬ್‌ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸಚಿವ ಮುರುಗೇಶ್‌ ನಿರಾಣಿ ನನ್ನ ಸೋಲಿಸಲು 2 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಸಿಗಬೇಕು: ಮಧು ಬಂಗಾರಪ್ಪ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಚಿವ ಮುರುಗೇಶ್‌ ನಿರಾಣಿ ಎರಡು ಕೋಟಿ ಖರ್ಚು ಮಾಡಿದ್ದಾರೆ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯನ್ನು ನಗರ ಕ್ಷೇತ್ರದಿಂದ ನಿಲ್ಲಿಸಿ ಎರಡು ಕೋಟಿ ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಗರದಲ್ಲಿ 20 ಸಾವಿರ ಗಾಣಿಗೇರ ಮತದಾರರು ಇದ್ದಾರೆ. ಅದಕ್ಕಾಗಿ ಬೆಳ್ಳುಬ್ಬಿಯನ್ನು ನಿಲ್ಲಿಸಿ ಯತ್ನಾಳ್ ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಬೆಳ್ಳುಬ್ಬಿಗೆ ಗಾಣಿಗೇರ ಸಮಾಜದವರೇ ಮತ ನೀಡಲಿಲ್ಲ. ಎಲ್ಲರೂ ನನಗೆ ಮತದಾನ ಮಾಡಿದರು ಎಂದು ನಿರಾಣಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾಜಿ MLA ಪುತ್ರನಿಗೆ ಸಪೋರ್ಟ್ ಆರೋಪ – CPI ಸಸ್ಪೆಂಡ್

ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ಮೊದಲ ದನಿ ಎತ್ತಿದ ಸ್ವಪಕ್ಷೀಯದವರು ಯತ್ನಾಳ್‌. ಯಡಿಯೂರಪ್ಪ ಬದಲಿಗೆ ಅವರ ಮಗ ಬಿ.ವೈ.ವಿಜಯೇಂದ್ರ ಆಡಳಿತ ನಡೆಸುತ್ತಿದ್ದಾರೆ. ಶೀಘ್ರವೇ ಸಿಎಂ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತಿನಂತೆಯೇ ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗಿಳಿದರು.

Comments

Leave a Reply

Your email address will not be published. Required fields are marked *