ಸಚಿವ ಮುನಿರತ್ನಗೆ ರಾಖಿ ಕಟ್ಟಿ ಶುಭಕೋರಿದ ಮಹಿಳಾ ಕಾರ್ಯಕರ್ತೆಯರು

ಬೆಂಗಳೂರು: ತೋಟಗಾರಿಕೆ ಹಾಗೂ ಯೋಜನಾ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಕಾರ್ಯಕರ್ತರು ರಕ್ಷಾ ಬಂಧನ ಅಂಗವಾಗಿ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿ ಶುಭಕೋರಿದ್ದಾರೆ.

ಮಲ್ಲೇಶ್ವರಂನ ಗೃಹ ಕಚೇರಿಯಲ್ಲಿ ರಕ್ಷಾ ಬಂಧನ ಆಚರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಮುನಿರತ್ನ ಅವರು, ಕ್ಷೇತ್ರದ ಕಾರ್ಯಕರ್ತೆಯರು ತಮಗೆ ರಾಖಿ ಕಟ್ಟಿ ಶುಭಕೋರಿರುವುದು ಸಂತಸ ತಂದಿದೆ. ರಕ್ಷಾ ಬಂಧನವೆನ್ನುವುದು ಒಡಹುಟ್ಟಿದವರ ಬಾಂಧವ್ಯ ಅಷ್ಟೇ ಅಲ್ಲದೇ, ಭ್ರಾತೃತ್ವ ಭಾವ ಹೊಂದಿರುವ ಪ್ರತಿಯೊಬ್ಬರ ಮನಸಿನ ಭಾವವೂ ಆಗಿದೆ. ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವ ಸಂದರ್ಭದಲ್ಲಿ ಈ ರಕ್ಷಾಬಂಧನವೂ ಬಂದಿದೆ. ಕ್ಷೇತ್ರದ ಕಾರ್ಯಕರ್ತರ ಸ್ನೇಹ ಆಶೀರ್ವಾದ ಹೀಗೆ ಸದಾ ಇರಲಿ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಶಾಸಕ ಮುನಿರತ್ನರವರ ಹುಟ್ಟುಹಬ್ಬವನ್ನ ಆಚರಿಸಿದ ಅನಾಥ ಮಕ್ಕಳು

ಇದೇ ವೇಳೆ ತೋಟಗಾರಿಕಾ ಇಲಾಖೆ ಹಾಗೂ ಯೋಜನೆ ಸಾಂಖ್ಯಿಕ ಇಲಾಖೆಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಮುನಿರತ್ನರವರು ತಿಳಿಸಿದ್ದಾರೆ.  ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

Comments

Leave a Reply

Your email address will not be published. Required fields are marked *