ಯತ್ನಾಳ್‌ರನ್ನ ಕಾಂಗ್ರೆಸ್‌ಗೆ ಸೇರಿಸಿಕೊಳ್ಳೋದು ಕಷ್ಟ – ಎಂ.ಬಿ ಪಾಟೀಲ್‌

ವಿಜಯಪುರ: ಶಾಸಕ ಬಸನಗೌಡ ಪಾಟೀಲ್‌ (Basanagouda Patil Yatnal) ಅವರನ್ನ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ ಅಂತ ಸಚಿವ ಎಂ.ಬಿ ಪಾಟೀಲ್‌ (M.B. Patil) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ನಾನು ಏನು ಹೇಳಲ್ಲ. ಆದ್ರೆ ಅವರು ನಮ್ಮ ಪಕ್ಷಕ್ಕೆ ಯಾವುದೇ ಅರ್ಜಿ ಹಾಕಿಲ್ಲ. ಹಾಕಿದರು ಕೂಡ ನಮ್ಮಲ್ಲಿ ಅವರನ್ನು ಸೇರಿಸಿಕೊಳ್ಳುವುದು ಕಷ್ಟ ಇದೆ. ಅವರು ಒಂದು ಸಮಾಜದ (ಮುಸ್ಲಿಂ) ವಿರುದ್ಧ ಬಹಳಷ್ಟು ಮಾತನಾಡಿದ್ದಾರೆ. ಈ ಕಾರಣ ನಮ್ಮಲ್ಲಿ ಅವರನ್ನ ಸೇರಿಸಿಕೊಳ್ಳುವುದು ಕಷ್ಟ ಅಂತ ಸಚಿವರು ಹೇಳಿದ್ದಾರೆ.

ಇದೇ ವೇಳೆ ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣ ನೋಡಿಕೊಳ್ಳಲು ಗೃಹ ಸಚಿವರು, ಪೊಲೀಸರು ಇದ್ದಾರೆ. ಅವರು ಪ್ರಕರಣವನ್ನ ಬಯಲಿಗೆ ಎಳೆಯುತ್ತಾರೆ ಎಂದಿದ್ದಾರೆ.  ಇದನ್ನೂ ಓದಿ: ಬೆಂಗ್ಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ಬಿಲ್‌ಗೆ ವಿರೋಧ – ಕಪ್ಪು ಪಟ್ಟಿ ಧರಿಸಿ ರಂಜಾನ್‌ ಪ್ರಾರ್ಥನೆ

ಇನ್ನೂ ಹನಿಟ್ರ್ಯಾಪ್ ವಿಚಾರದಲ್ಲಿ ಸಚಿವ ರಾಜಣ್ಣ ದೂರು ಯಾಕೆ ಕೊಟ್ಟಿಲ್ಲ ಎನ್ನುವ ವಿಚಾರ ಕುರಿತು ಮಾತನಾಡಿ, ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ. ದೂರು ಕೊಡೋದು ಅವರಿಗೆ ಬಿಟ್ಟ ವಿಚಾರ. ಯಾಕೆ ಏನು ಅನ್ನೋದನ್ನ ರಾಜಣ್ಣರಿಗೆ ಕೇಳಬೇಕು ಅಂತ ಹೇಳಿದ್ದಾರೆ.  ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

ಮುಂದುವರಿದು.. ರಾಜ್ಯಾಧ್ಯಕ್ಷ ಬದಲಾವಣೆಯನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಮಾತನಾಡೋದ್ರಲ್ಲಿ ಅರ್ಥ ಇಲ್ಲ ಅಂತ ಎಂಬಿಪಿ ತಿಳಿಸಿದ್ದಾರೆ.  ಇದನ್ನೂ ಓದಿ: ಹೋಟಲ್‌ನಲ್ಲಿದ್ದಾಗ ಭೂಕಂಪ – 10ನೇ ಫ್ಲೋರ್‌ನಿಂದ ಕನ್ನಡಿಗರು ಬದುಕಿ ಬಂದಿದ್ದೇ ರೋಚಕ!