ಸಿದ್ದರಾಮಯ್ಯ ಕೋಟಾ ಮುಗಿದ ಬಳಿಕ ನಾನೇ ಸಿಎಂ-ಆಸೆ ಬಿಚ್ಟಿಟ್ಟ ಸಚಿವ ಎಂ.ಬಿ.ಪಾಟೀಲ್

ವಿಜಯಪುರ: ನನಗೂ ಮುಖ್ಯಮಂತ್ರಿ ಆಗುವ ಆಸೆಯಿದೆ. ಆಸೆ ಪಡುವುದರಲ್ಲಿ ಏನು ತಪ್ಪಿಲ್ಲ, ಬರುವ ಚುನಾವಣೆಯನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎದುರಿಸುತ್ತೇವೆ. ಮುಂದಿನ ಬಾರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗತ್ತಾರೆ. ನಂತರ ನಾನೇ ಸಿಎಂ ಆಗ್ತೀನಿ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ.

ಪ್ರತ್ಯೇಕ ನಾಡ ಧ್ವಜ ತರುವುದರಲ್ಲಿ ಯಾವುದೇ ತಪ್ಪಿಲ್ಲ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆಯಾ ರಾಜ್ಯಗಳಿಗೆ ಪ್ರತ್ಯೇಕ ಧ್ವಜಗಳಿವೆ. ರಾಷ್ಟ್ರೀಯತೆ ಬಂದಾಗ ಮೊದಲು ದೇಶ, ನಂತರ ರಾಜ್ಯ ಬರುತ್ತದೆ. ಪ್ರತ್ಯೇಕ ನಾಡಧ್ವಜ ತರುವುದು ತಪ್ಪಲ್ಲ. ಇನ್ನು ಪಿಎಸ್‍ಐ ಗೋಪಾಲ್ ಅವರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿದ್ದಾರೆ. ಕೊಲೆಗುಡುಕರು, ಕ್ರಿಮಿನಲ್ ಗಳಿಗೆ ಬೆಂಬಲ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.

ಕನ್ನಡ ನೆಲ, ಜಲ ರಕ್ಷಣೆಯಲ್ಲಿ ಹಲವು ಮಹನಿಯರ ಕೊಡುಗೆ ಅಪಾರವಾಗಿದೆ. ನಮ್ಮದು ಶರಣರ ನಾಡು, ಶರಣರ ಆಶಯದಂತೆ ನಾವು ಜನ ಸೇವೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ನೀರಾವರಿಗೆ ಹೆಚ್ಚು ಒತ್ತು ನೀಡಿದೆ. ಹಲವು ಹೊಸ ಯೋಜನಗೆಳನ್ನ ಹಾಗೂ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಫೂರ್ಣಗೊಳಿಸಲು ಪ್ರಯತ್ನಿಸುತ್ತಿದೆ. ವಿಜಯಪುರ ಜಿಲ್ಲೆಯನ್ನ ಬರ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸತತವಾಗಿ ಪ್ರಯತ್ನಿಸಲಾಗುತ್ತಿದೆ. ಇನ್ನು ಕೃಷ್ಣಾ ಮೇಲ್ಡಂಡ, ಮುಳವಾಡ ಏತ ನೀರಾವರಿ ಯೋಜನೆಯನ್ನ ತ್ವರಿತವಾಗಿ ಜಾರಿಗೆ ತರುತ್ತೇವೆ ಅಂತಾ ತಿಳಿಸಿದರು.

 

Comments

Leave a Reply

Your email address will not be published. Required fields are marked *