RSS ಟೀಕಿಸಿದರೆ ದೊಡ್ಡ ಮನುಷ್ಯರಾಗ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ ಮಾಜಿ ಸಿಎಂಗಳು: ಈಶ್ವರಪ್ಪ

– RSS ಒಂದು ಕೂದಲನ್ನೂ ಅಲ್ಲಾಡಿಸಲು ಆಗಲ್ಲ

ಶಿವಮೊಗ್ಗ: RSS ಟೀಕಿಸಿದರೆ ದೊಡ್ಡ ಮನುಷ್ಯರಾಗುತ್ತೇವೆ ಎಂಬ ಭ್ರಮೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. RSS ಇಂದು ದೇಶದಲ್ಲಿ, ಪ್ರಪಂಚದಲ್ಲಿ ದೊಡ್ಡ ಸಂಘಟನೆ ಆಗಿ ಬೆಳೆದಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅಲ್ಲ, ಯಾರಿಂದಲೂ RSS ನ ಒಂದು ಕೂದಲನ್ನು ಅಲ್ಲಾಡಿಸಲು ಆಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಡೀ ದೇಶದ ಹಳ್ಳಿಹಳ್ಳಿಯಲ್ಲಿ RSS ನ ಸ್ವಯಂ ಸೇವಕರು ಇದ್ದಾರೆ. ಈ ದೇಶವನ್ನು ರಕ್ಷಣೆ ಮಾಡುತ್ತಾರೆ. RSS ಸಂಘಟನೆ ಇಡೀ ದೇಶದಲ್ಲಿ, ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಿರುವ ಪ್ರಪಂಚದಲ್ಲಿಯೇ ದೊಡ್ಡ ಸಂಘಟನೆ ಎಂದರು.

ಉಪ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಕೇವಲ ಅನಿಸಿಕೊಳ್ಳಲು ಮಾತ್ರ ಇಲ್ಲ. ನಮ್ಮ ಪಕ್ಷ ಯಾವುದೇ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಹಗುರವಾದ ಟೀಕೆ ಮಾಡಿಲ್ಲ. ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದ್ದರು. ಅಲ್ಲದೆ ನಾವು ಇಂದಿರಾ ಗಾಂಧಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು ಎಂದರು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

ಈಗಿನ ಕಾಂಗ್ರೆಸ್ ಸ್ಥಿತಿ ಇಂದು ಏನಾಗಿದೆ, ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿ ಅವರ ಬಗ್ಗೆ ಹೆಬ್ಬೆಟ್ಟಿನ ಗಿರಾಕಿ ಅಂತಾ ಸೊಕ್ಕಿನ ಮಾತನ್ನು ಹೇಳುತ್ತಾರಲ್ಲಾ, ನಾವೆಲ್ಲಾ ಮಂಡಕ್ಕಿ ತಿನ್ನುತ್ತಾ ಕೂರಬೇಕಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು. ಕಾಂಗ್ರೆಸ್ ನವರ ಇಂತಹ ಮಾತಿನಿಂದ ದೇಶದ, ಪ್ರಪಂಚದ ಎಲ್ಲಾ ಜನರಿಗೆ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಡ್ರಗ್ಸ್ ಪೆಡ್ಲರ್ ಅಂತಾ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಹೆಬ್ಬೆಟ್ ಗಿರಾಕಿ ಅಂತಾ ಹೇಳಿದ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ನಿಮ್ಹಾನ್ಸ್ ಗಿಂತ ಬೇರೆ ಆಸ್ಪತ್ರೆ ಹುಡುಕಿದ್ರೂ ಹುಚ್ಚು ವಾಸಿಯಾಗಲ್ಲ ಎಂದರು. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

ನಮ್ಮ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಇದೇ ರೀತಿ ಹಗುರವಾಗಿ ಮಾತನಾಡಿದರೆ ಇನ್ನೂ ಬೇರೆ ಬೇರೆ ಪದಗಳನ್ನು ಬಳಸಬೇಕಾಗುತ್ತದೆ. ನರೇಂದ್ರ ಮೋದಿ ಟೀಕಿಸಿದ ಸಿದ್ದರಾಮಯ್ಯ ಅವರು ದೇಶದ ಜನತೆ ಎದುರು ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

Comments

Leave a Reply

Your email address will not be published. Required fields are marked *