ನೀನು ರಾಜ್ಯಕ್ಕೆ ಬೆಂಕಿ ಹಚ್ಚಿದವನು, ಕೂತ್ಕೊಳಲೇ- ಜಮೀರ್ ವಿರುದ್ಧ ಈಶ್ವರಪ್ಪ ಕಿಡಿ..!

ಬೆಂಗಳೂರು: ನಿನಗೆ ಏನು ಗೊತ್ತಿದೆ ಕೂತ್ಕೊಳ್ಳಲೇ..ಕೂತ್ಕೊಳಲೇ ಸುಮ್ಮನೆ, ಇಡೀ ರಾಜ್ಯಕ್ಕೆ ನೀನು ಬೆಂಕಿ ಹಚ್ಚಿದವನು. ಬರೀ ಕಾಂಗ್ರೆಸ್ ಗೆ ಬೆಂಕಿ ಹಾಕಿದವನು ಅಲ್ಲ, ರಾಜ್ಯಕ್ಕೆ ಬೆಂಕಿ ಹಾಕಿದವನು. ಹೀಗೆ ಜಮೀರ್ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.

ವಿಧಾನಸಭೆಯಲ್ಲಿ ನಿಯಮ 68ರಡಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಅವರ ಬೆಂಬಲಕ್ಕೆ ನಿಂತು ಜಮ್ಮೀರ್ ಮಧ್ಯಪ್ರವೇಶಿಸಿದರು. ಈ ವೇಳೆ ಜಮ್ಮೀರ್ ಗೆ ಏಕವಚನದಲ್ಲೇ ಈಶ್ವರಪ್ಪ ತಿರುಗೇಟು ಕೊಟ್ಟರು. ಸುಮ್ಮನೆ ಕೂತ್ಕೊಳ್ಳೋ, ಕೂತ್ಕಳಲೇ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ರು. ಇದನ್ನೂ ಓದಿ: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಸಿದ್ದು

ಈಶ್ವರಪ್ಪ ಮಾತಿಗೆ ಶಾಸಕ ಜಮೀರ್ ಆಕ್ರೋಶ ವ್ಯಕ್ತಪಡಿಸಿದರು. 144 ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ, ಮಂತ್ರಿಯಾಗಿ ಅವರಿಗೆ ಮಾತನಾಡಲು ನೈತಿಕ ಹಕ್ಕಿಲ್ಲ ಅಂತಾ ಕಿಡಿಕಾರಿದ್ರು. ಈ ವೇಳೆ ಈಶ್ವರಪ್ಪ ಏಕವಚನ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

ಸದನದಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲದ ವಾತಾವರಣ ಉಂಟಾಯ್ತು. ಸಿದ್ದರಾಮಯ್ಯ ಮಾತನ್ನ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ ನೀವು ಮಾತಾಡಿ ಸರ್ ಎಂದು ಸಿದ್ದರಾಮಯ್ಯಗೆ ಜಮೀರ್ ಹೇಳಿದ್ರು. ಬಳಿಕ ಗದ್ದಲ ಕಡಿಮೆ ಆಯ್ತು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

Comments

Leave a Reply

Your email address will not be published. Required fields are marked *