ಎಸ್‍ಎಂಕೆ ಎಲ್ಲ ಪಡೆದಿದ್ದಾರೆ, ನಾನು ಪಡೆದಿದ್ದೀನಾ: ಕಾಗೋಡು ಪ್ರಶ್ನೆ

ಚಿಕ್ಕಬಳ್ಳಾಪುರ: ಬರ ಪರಿಹಾರಕ್ಕಾಗಿ ಕೈಗೊಂಡ ಕಾಮಗಾರಿಗಳು ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಂದಾಯ ಸಚಿವ ಕಾಗೋಡು ತಿಮಪ್ಪ ನಡೆಸಿದರು. ಕಂದಾಯ ಇಲಾಖೆಯಲ್ಲಿ ಬಗರುಹುಖಂ ಅರ್ಜಿ ವಿಲೇವಾರಿ ಹಾಗೂ ಸಾಗುವಳಿ ಚೀಟಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಎಸ್ ಎಂ ಕೃಷ್ಣ ಬಿಜೆಪಿ ಸೇರಿದ ಬಗ್ಗೆ ಪ್ರತಿಕ್ರಿಯಿಸಿ, ಎಸ್‍ಎಂ ಕೃಷ್ಣ ಈ ದೇಶದಲ್ಲಿ ರಾಜಕೀಯವಾಗಿ ಎಲ್ಲಾ ಸ್ಥಾನಮಾನಗಳನ್ನ ಅನುಭವಿಸಿದ್ದಾರೆ. ಆದ್ರೆ ನಾನು ಪಡೆದಿದ್ದೀನಾ ಅಂತ ಪ್ರಶ್ನೆ ಹಾಕಿದ್ರು. ರಾಜಕಾರಣದಲ್ಲಿ ಸ್ವಚ್ಛತೆ, ತತ್ವ ಸಿದ್ದಾಂತಗಳಿಗೆ ಬದ್ಧತೆ ಇರಬೇಕು ಅಂತ ಎಸ್‍ಎಂಕೆ ನಿಲುವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕುಟುಂಬ ಸದಸ್ಯರನ್ನು ರಾಜಕರಾಣಕ್ಕೆ ಪ್ರವೇಶ ಮಾಡಿಸ್ತೀರಾ ಅಂತ ಮಾಧ್ಯಮದವರ ಪ್ರಶ್ನೆಗೆ ಬೇಡ ಅಂತಲೇ ಉತ್ತರಿಸಿದ ಸಚಿವರು ಈ ರಾಜಕಾರಣ ಸಾಕಾಗಿದೆ ನನಗೆ ಅಂತ ಆಸೆ ಇಲ್ಲ ಅಂತ ನಗು ಮುಖದಿಂದಲೇ ಉತ್ತರಿಸಿದರು.

ಎಚ್‍ಕೆ ಪಾಟೀಲ್ ಸಾಥ್: ಬರ ಅಧ್ಯಯನಕ್ಕೆ ಚುನಾವಣಾ ಪ್ರಚಾರಕ್ಕೆ ಗುಡ್ ಬೈ ಹೇಳಿದ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸಾಥ್ ನೀಡಿದ್ರು. ಸಚಿವ ಪಾಟೀಲ್ ಇಂದು ಧಾರವಾಡ, ಬೆಳಗಾವಿ ವಿಭಾಗದಲ್ಲಿ ಬರ ಪರಿಹಾರ ಕಾಮಗಾರಿ ಪರಿಶೀಲನೆ ನಡೆಸಿದ್ರು.

Comments

Leave a Reply

Your email address will not be published. Required fields are marked *