ತುಮಕೂರು: ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನು ಕೂಡ ನೋಂದಣಿ ಮಾಡುವಂತಹ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರದಲ್ಲಿ ಮಾತನಾಡಿದ ಅವರು, ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡಿಗೆ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟಿಸ್ ಬೋರ್ಡ್‍ಗೆ ಹಾಕಿ ಆಕ್ಷೇಪಣೆಗೆ ಸಮಯವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ ಎಂದು ಹೇಳಿದರು.

ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇನೆ. ಆ ನಿಟ್ಟಿನಲ್ಲಿ ಪರಾಮರ್ಶೆ ನಡೆದಿದೆ. ಬಲವಂತ ಹಾಗೂ ಆಮಿಷ ಒಡ್ಡಿ ಮಾಡುವ ಮತಾಂತರ ಈಗಾಗಲೇ ನಿಷೇಧ ಇದ್ದು, ಮತಾಂತರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಅನ್ನೋದು ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ವೇದಿಕೆ ಮೇಲೆ ಕಣ್ಣೀರಿಟ್ಟ ಮಾಧುಸ್ವಾಮಿ

ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳ್ಳುತಿದ್ದು, ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲ ಎಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದಾಗಿದೆ. ಜೊತೆಗೆ ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ, ಧರ್ಮವನ್ನು ಕಳೆದುಕೊಳ್ಳುತ್ತಾನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಯುದ್ಧವನ್ನೂ ಗೆಲ್ಲಲಿದೆ: ರಾಜನಾಥ್ ಸಿಂಗ್

ಪರಿಶಿಷ್ಠ ಜಾತಿ ವ್ಯಕ್ತಿ ಕ್ರಿಶ್ಚಿಯನ್ ಗೆ ಮತಾಂತರಗೊಂಡರೆ, ಆತ ಅಲ್ಪಸಂಖ್ಯಾತ ಎಂದಾಗುತ್ತದೆ. ಆತನ ಮೂಲ ಜಾತಿ ಪ್ರಮಾಣ ಪತ್ರ ಬದಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ ಬರೋಬ್ಬರಿ 10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!

Leave a Reply