ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮೊದಲು ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೆ ಬರುವುದು ಬೇಡ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಹಾಸನದಲ್ಲಿ ನೂತನ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಹಾಸನದಲ್ಲಿ ಮಾತಮಾಡಿದ ಆರ್.ಅಶೋಕ್, ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ ಎಂದು ರೇವಣ್ಣ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಅಭಿವೃದ್ಧಿ ಕಾರ್ಯಕ್ಕೆ ಯಾರು ತೊಂದರೆ ಕೊಡಬಾರದು. ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ. ನಿಮ್ಮ ಕೈಯಲ್ಲಿ ಮಾಡೋದಕ್ಕೆ ಆಗಿಲ್ಲ. ಹೊಸದಾಗಿ ಮಾಡೋಕೆ ಹೋದರೆ ಯಾಕೆ ಕಲ್ಲು ಹಾಕ್ತೀರಿ. ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಇಲ್ಲಿಯವರೆಗೂ ಬರೋದು ಬೇಡ. ಅವರ ಕಾಲದಲ್ಲಿ ಆಗಿಲ್ಲ ಅಂತ ಬೇಜಾರು ಅವರಿಗೆ. ಎಲ್ಲಾ ನಾನೇ ಮಾಡಿದೆ ಅಂತಾರೆ. ಈ ಮೈಂಡ್ ಸೆಟಪ್ ಮೊದಲು ಹೋಗಬೇಕು. ನೀವು ಮಾಡಿದ್ರೆ ನ್ಯಾಯ, ಬೇರೆಯವರು ಮಾಡಿದ್ರೆ ಯಾಕೆ ನಂಬಲ್ಲ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ

ನಾವು ‘ಎ’ ಟಿಂ ‘ಬಿ’ ಟೀಂ ಮಾತು ಕೇಳಲ್ಲ. ಕಾಂಗ್ರೆಸ್-ಜೆಡಿಎಸ್ ‘ಎ’ ಟೀಂ ‘ಬಿ’ ಟೀಂ. ಲೋಕಸಭಾ ಚುನಾವಣೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡ್ರಿ..?. ದೇವೇಗೌಡರು ಯಾರ ಬೆಂಬಲದಿಂದ ಪ್ರಧಾನಮಂತ್ರಿ ಆದರು. ಹತ್ತು ಸರಿ ಹೊಂದಾಣಿಕೆ ಮಾಡಿಕೊಂಡು ‘ಎ’ ಟೀಂ ‘ಬಿ’ ಟೀಂ ಅಲ್ಲ ಅಂತ ಏಕೆ ನಮ್ಮ ಮೇಲೆ ಆಪಾದನೆ ಮಾಡುತ್ತೀರಿ. ಪಕ್ಕಾ ಇವರಿಬ್ಬರು ಅಣ್‍ತಮ್ಮಾಸ್ ಇದ್ದಂಗೆ. ದೇವೇಗೌಡರಿಗೆ ಇವತ್ತು ಕಾಂಗ್ರೆಸ್ ಕಡೆಗೆ ಒಲವಿದೆ ಎಂದು ಆರ್.ಅಶೋಕ್ ಅಸಮಾಧಾನ ಹೊರಹಾಕಿದ್ರು.

Leave a Reply