ಯಾವುದೇ ಕ್ಷಣದಲ್ಲಾದ್ರೂ ಸಚಿವ ಡಿಕೆಶಿ ಬಂಧನ?

– ಕಾನೂನು ಹೋರಾಟಕ್ಕೆ ವಕೀಲರನ್ನ ಸಜ್ಜುಗೊಳಿಸಿದ್ದಾರಂತೆ ಡಿಕೆಶಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿಕೆ ಶಿವಕುಮಾರ್‍ಗೆ ಮತ್ತೆ ಕಂಟಕ ಎದುರಾದಂತಿದೆ. ದೆಹಲಿಯಲ್ಲಿ ಸಿಕ್ಕ 8.59 ಕೋಟಿ ರೂಪಾಯಿ ಮೊತ್ತದ ನಗದು ಸಂಬಂಧ ಜಲಸಂಪನ್ಮೂಲ ಮಂತ್ರಿ ವಿರುದ್ಧ ಎಫ್‍ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ.

ಹವಾಲಾ ಹಣ ಪ್ರಕರಣದಲ್ಲಿ ಇ.ಡಿ ಎಫ್‍ಐಆರ್ ದಾಖಲಿಸಿಕೊಂಡ್ರೆ ಡಿಕೆ ಶಿವಕುಮಾರ್ ಯಾವುದೇ ಕ್ಷಣದಲ್ಲಾದ್ರೂ ಅರೆಸ್ಟ್ ಆಗಬಹುದಾಗಿದೆ. ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ತಮ್ಮ ವಕೀಲರ ಜೊತೆ ಡಿಕೆ ಬ್ರದರ್ಸ್ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಬಿಜೆಪಿ ಅವರೆಲ್ಲ ನನ್ನ ಗೆಳೆಯರು – ಡಿಕೆಶಿ

ಆದ್ರೆ, ಇದುವರೆಗೂ ಯಾವುದೇ ನೊಟೀಸ್ ಬಂದಿಲ್ಲ. ಎಫ್‍ಐಆರ್ ದಾಖಲಾಗಿದೆ ಅನ್ನೋ ಮಾಹಿತಿ ಇಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನು, ಅಣ್ಣ ಶಿವಕುಮಾರ್ ಜೊತೆ ರಾತ್ರಿಯೆಲ್ಲಾ ಸಹೋದರ, ಸಂಸದ ಸುರೇಶ್ ಚರ್ಚೆ ನಡೆಸಿದ್ರು. ತಡರಾತ್ರಿ 11.30 ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಇಡಿ ಎಫ್‍ಐಆರ್ ಮಾಡಲಿ. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ನಾನಾಗಲಿ, ಡಿಕೆ ಶಿವಕುಮಾರ್ ಆಗ್ಲಿ ಭಯ ಪಡುವ ಪ್ರಮೇಯವೇ ಇಲ್ಲ. ಸರ್ಕಾರ ನಾವು ಇದನ್ನು ಫೇಸ್ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನು ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Comments

Leave a Reply

Your email address will not be published. Required fields are marked *