ಕನಕೋತ್ಸವ ಬಾಡಿ ಬಿಲ್ಡಿಂಗ್ ಶೋ ನಲ್ಲಿ ಬೈಸೆಪ್ಸ್ ಪ್ರದರ್ಶಿಸಿದ ಡಿಕೆಶಿ

ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಅದ್ಧೂರಿ ಕನಕೋತ್ಸವ ಕಾರ್ಯಕ್ರಮದಲ್ಲಿ ದೇಹದಾರ್ಡ್ಯ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು, ಈ ವೇಳೆ ಕಾರ್ಯಕ್ರಮದಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ತಮ್ಮ ಬೈಸೆಪ್ಸ್ ಪ್ರದರ್ಶಿಸಿದ ಘಟನೆಗೆ ಸಾಕ್ಷಿಯಾಯಿತು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಟ್ಟದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ 55 ಕೆಜಿ ಯಿಂದ 95 ಕೆಜಿ ಯವರೆಗೆ ಒಟ್ಟು 4 ವಿಭಾಗದ ಜೊತೆಗೆ ಕನಕಪುರದ ದೇಹದಾರ್ಡ್ಯ ಪಟುಗಳಿಗಾಗಿ ಲೋಕಲ್ ಬಾಯ್ಸ್ ಟೈಟಲ್‍ನ್ನು ಸಹ ಆಯೋಜಿಸಲಾಗಿತ್ತು.

ದೇಹದಾರ್ಡ್ಯ ಸ್ಪರ್ಧೆಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣರವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಜೇತರಾದ ದೇಹದಾರ್ಡ್ಯ ಪಟುಗಳ ಜೊತೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಬೈಸೆಪ್ಸ್ ನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ವೀಕ್ಷಕರಲ್ಲಿ ಹುಚ್ಚೆಬ್ಬಿಸಿದ್ರು. ಮಿ.ಕನಕೋತ್ಸವ ವಿಜೇತ ಬಿಡದಿಯ ಸಂದೀಪ್ ಕುಮಾರ್‍ಗೆ 25 ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು.

Comments

Leave a Reply

Your email address will not be published. Required fields are marked *