ಅವ್ರೆಲ್ಲಾ ನಮ್ಮ ಸೀನಿಯರ್ ಲೀಡರ್ಸ್, ನಾನೊಬ್ಬ ವರ್ಕರ್: ಡಿಕೆಶಿ ತಿರುಗೇಟು

ನವದೆಹಲಿ: ಪಕ್ಷದ ಹೈಕಮಾಂಡ್ ಹೇಳಿದ ಕೆಲಸವನ್ನು ನಾನು ಮಾಡುತ್ತೇನೆ. ಜಾರಕಿಹೊಳಿ ಸಹೋದರರು ನಮ್ಮ ಪಕ್ಷದ ಹಿರಿಯ ಮುಖಂಡರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿಕೆಶಿ ತಿರುಗೇಟು ನೀಡಿದ್ದಾರೆ.

ನಾನಗೆ ಯಾರ ಬಗ್ಗೆಯೂ ವೈಯಕ್ತಿಕ ಆಸಕ್ತಿ ಇಲ್ಲ. ಪಕ್ಷ ನನಗೆ ಸೂಚಿಸಿದ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತೇನೆ. ನನಗೆ ಯಾರ ಮಧ್ಯೆಯ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ನಮ್ಮ ನಾಯಕರು ತಮ್ಮ ಕಷ್ಟಕ್ಕೆ ಕರೆದರೂ ಹೋಗುತ್ತೇನೆ. ಅವರ ಕಷ್ಟಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ರಾಜ್ಯದ ಯಾವುದೇ ಜಿಲ್ಲೆಯ ನಾಯಕರು ಕರೆದ್ರೂ ನಾನು ಹೋಗುತ್ತೇನೆ. ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತೇನೆ ಅಂತಾ ಹೇಳಿದ್ದಾರೆ.

ನಾಯಕರ ಬಹಿರಂಗ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗಿಲ್ಲ. ಈಗಾಗಲೇ ಪಕ್ಷ ಯಾರಿಗೆ ಬುದ್ದಿವಾದ ಹೇಳಬೇಕಿದೆ ಅವರಿಗೆ ಹೇಳಿದೆ. ಸ್ಥಳೀಯ ಶಾಸಕರು ಅವರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ ಅಂತಾ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ರಮೇಶ್ ಜಾರಕಿಹೊಳಿಯನ್ನು ಏಕಾಂಗಿಯಾಗಿ ಭೇಟಿಯಾದ್ರು ಡಿಕೆ ಸುರೇಶ್!

ರಮೇಶ್ ಜಾರಕಿಹೊಳಿ ಹೇಳಿದ್ದೇನು..?
ಜಿಲ್ಲೆಯಲ್ಲಿ ಪಕ್ಷದ ಪರ ಕಾರ್ಯನಿರ್ವಹಿಸಲು ನಾವು ಸಮರ್ಥವಾಗಿದ್ದು, ಇಲ್ಲಿನ ರಾಜಕಾರಣದ ಬಗ್ಗೆ ಡಿಕೆ ಶಿವಕುಮಾರ್ ಹೇಳುವ ಅವಶ್ಯಕತೆ ಇಲ್ಲ. ಜಿಲ್ಲಾ ರಾಜಕಾರಣದಲ್ಲಿ ಈ ಹಿಂದೆಯೂ ಸುಮಾರು ಬಾರಿ ಪ್ರವೇಶ ಮಾಡಲು ಸಚಿವ ಡಿಕೆ ಶಿವಕುಮಾರ್ ಅವರು ಪ್ರಯತ್ನಿಸಿದ್ದರು. ಆದರೆ ಅಂದು ಪ್ರವೇಶ ಮಾಡಲು ಬಿಡಲಿಲ್ಲ. ಇಂದು ಕೂಡ ಅಷ್ಟೇ. ಅವರು ಯಾರು ನಮಗೆ ಹೇಳಲು, ನಾವು ಪಕ್ಷ ಸಂಘಟನೆ ಮಾಡಲು ಸಮರ್ಥವಾಗಿದ್ದೇವೆ. ಪಕ್ಷಕ್ಕೆ ಒಳ್ಳೆ ಆಗುವ ಅಂಶಗಳ ಕುರಿತು ಸಲಹೆ ನೀಡಲು ಮಾತ್ರ ಸಾಧ್ಯವಿದ್ದು. ಅನಗತ್ಯವಾಗಿ ರಾಜಕೀಯ ಮಾಡಲು ಇಲ್ಲಿ ಅವಕಾಶವಿಲ್ಲ ಎಂದು ಎಂದು ಸಚಿವ ರಮೇಶ್ ಜಾರಕಿಹೊಳಿ ಖಾರವಾಗಿಯೇ ಏಕವಚನದಲ್ಲೇ ಕಿಡಿಕಾರಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಗೆಲವು:
ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಜಟಾಪಟಿಯ ಕಾನೂನು ಸಮರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮೊದಲ ಗೆಲುವಾಗಿದೆ. ಈ ಮೂಲಕ ಪಿಎಲ್‍ಡಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಲು ನಡೆಸಿದ ಪ್ರಯತ್ನದಲ್ಲಿ ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾಗಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆಸುವಂತೆ ಆಗ್ರಹಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಬೀದಿಗಿಳಿದು ಲಕ್ಷ್ಮೀ ಹೆಬ್ಬಾಳಕರ್ ಹೋರಾಟ ನಡೆಸಿದ್ದರು. ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಬೆಳಗಾವಿ ತಹಶೀಲ್ದಾರ್ ಚುನಾವಣೆಯನ್ನು ಮುಂದೂಡಿದ್ದರು. ಈಗ ಮಾನ್ಯ ಧಾರವಾಡ ಹೈಕೊರ್ಟ್ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=SmobRicNJR4

Comments

Leave a Reply

Your email address will not be published. Required fields are marked *