ಬೆಂಗಳೂರು: ಇಡೀ ದೇಶದಲ್ಲಿ ಭ್ರಷ್ಟಾಚಾರ (Corruption) ಇದೆ. ಭ್ರಷ್ಟಾಚಾರ ಇಲ್ಲ ಅಂತ ಹೇಳೋಕೆ ಸಾಧ್ಯವೇ ಇಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ (Dinesh GunduRao) ತಿಳಿಸಿದ್ದಾರೆ.
ವಸತಿ ಇಲಾಖೆಯಲ್ಲಿನ ಅಕ್ರಮದ ಕುರಿತು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (BR Patil) ಆಡಿಯೋ ಬಿಡುಗಡೆ ಬಗ್ಗೆ ವಿಧಾನಸೌಧದಲ್ಲಿ ಸಚಿವರು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ: ಈಶ್ವರ್ ಖಂಡ್ರೆ

ಬಿ.ಆರ್ ಪಾಟೀಲ್ ಏನ್ ಹೇಳಿದ್ದಾರೆ ಗೊತ್ತಿಲ್ಲ, ಅವರನ್ನೇ ಕೇಳಬೇಕು. ಅಂತಹ ಭ್ರಷ್ಟಾಚಾರ ಏನಾದ್ರು ಆಗಿದ್ರೆ ಅದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಏನಾದ್ರೂ ಮಾಹಿತಿಗಳು ಇದ್ದರೆ ಪಾಟೀಲ್ ಅವರು ಕೊಡಲಿ. ಸಂಬಂಧಪಟ್ಟ ಸಚಿವರ ಜತೆ ನಾನೇ ಮಾತಾಡ್ತೀನಿ ಎಂದರು. ಇದನ್ನೂ ಓದಿ: ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ – ಕೇಂದ್ರದ ಮಾದರಿ ಅನುಸರಿಸಿದ್ದೇವೆ: ಜಮೀರ್
ಇಡಿ, ಐಟಿಯಲ್ಲೂ ಭ್ರಷ್ಟಾಚಾರ ಇದೆ:
ಭ್ರಷ್ಟಾಚಾರ ಸಹಿಸೋಕೆ ಸಾಧ್ಯವಿಲ್ಲ. ಭ್ರಷ್ಟಾಚಾರ ಇಲ್ಲವೇ ಇಲ್ಲ ಅಂತ ಹೇಳೋಕೆ ಆಗೊಲ್ಲ. ಕೇಂದ್ರ ಸರ್ಕಾರದಲ್ಲೂ (Central Government) ಭ್ರಷ್ಟಾಚಾರ ಇದೆ. ಇಡಿ, ಐಟಿಯಲ್ಲೂ ಭ್ರಷ್ಟಾಚಾರ ಇದೆ. ರೇಡ್ ಮಾಡಿ ಬಳಿಕ ಹಣ ಪಡೆದು ರೇಡ್ ಕೈ ಬಿಡೋ ವ್ಯವಸ್ಥೆಗಳೂ ಇವೆ. ಭ್ರಷ್ಟಾಚಾರ ಎಲ್ಲಾ ಕಡೆ ಇದೆ. ಅದನ್ನ ನಿಯಂತ್ರಣ ಮಾಡೋ ಕೆಲಸಗಳು ಆಗಬೇಕು ಎಂದರು. ಇದನ್ನೂ ಓದಿ: ಮನೆಯೊಂದು ಮೂರು ಬಾಗಿಲು – ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಬಿಜೆಪಿ ಭಿನ್ನಮತ ತಾರಕಕ್ಕೆ!
ಬಿ.ಆರ್ ಪಾಟೀಲ್ ದಾಖಲಾತಿ ಕೊಟ್ಟರೆ ಆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ಪಾಟೀಲ್ ಹೇಳಿಕೆ ಏನು ಸರ್ಕಾರಕ್ಕೆ ಮುಜುಗರ ತಂದಿಲ್ಲ. ಅವರು ಹೇಳಿದ್ದಾರೆ. ದಾಖಲಾತಿ ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಸೋಮವಾರ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಭೇಟಿಗೆ ನಿರ್ಧಾರ
