ಮತ್ತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರ ಡಿಕೆಶಿ ಬ್ಯಾಟಿಂಗ್

ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಮತ್ತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಇದನ್ನು ಮಾಧ್ಯಮಗಳ ಮುಂದೆ ಯಾರು ಬಹಿರಂಗ ಪಡಿಸಬಾರದು. ಕೆಲವರು ಏನೇನು ಹೇಳಬೇಕೋ ಎಲ್ಲವನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಕೆಲಸ ಮಾಡಲು ಅವಕಾಶ ಮಾಡಿಕೊಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯ ಅಕ್ಕಿ ಕಡಿತ: ಮಾಜಿ ಸಿಎಂಗೆ ಡಿಕೆಶಿ ಟಾಂಗ್

ಸಿಎಂ ಕುಮಾರಸ್ವಾಮಿ ಅವರನ್ನು ನಾವು ಚಿಕ್ಕವರಿಂದಲೂ ಗಮನಿಸಿದ್ದೇವೆ. ಅವರು ಭಾವನಾತ್ಮಕವಾಗಿದ್ದಾರೆ ಇದು ಹೊಸದೇನಲ್ಲ. ಯಾರೇ ನೊಂದವರು ಮತ್ತು ಬೆಂದವರನ್ನು ಕಂಡರೆ ಕೂಡಲೇ ಅವರಿಗೆ ಕಣ್ಣೀರು ಬರುತ್ತದೆ. ಅವರ ಪ್ರೀತಿಯ ಕಾರ್ಯಕರ್ತರು, ಅಧಿಕಾರಕ್ಕೆ ತಂದವರು ಅವರನ್ನು ನೋಡಿ ಸ್ವಲ್ಪ ಉದ್ವೇಗಕ್ಕೆ ಒಳಗೊಂಡಿದ್ದಾರೆ. ಅದು ಸ್ವಭಾವಿಕ ಮನುಷ್ಯನ ಕೆಲವು ಗುಣಗಳು ಇರುತ್ತವೆ.

ಕೆಲವು ಸಂದರ್ಭದಲ್ಲಿ ಅಂದರೆ ವಿಕಲಚೇತನರನ್ನು ನೋಡಿ ಹಾಗೂ ಚುನಾವಣೆ ವೇಳೆಯೂ ಅತ್ತಿದ್ದನ್ನು ನಾವು ನೋಡಿದ್ದೇವೆ. ಒಬ್ಬರ ಗುಣ ಒಂದೊಂದು ರೀತಿ ಇರುತ್ತದೆ. ಅದನ್ನು ನಾವು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪರಮೇಶ್ವರ್ ಹೇಳಿದಂತೆ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *