ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ

– ಮಧ್ಯಾಹ್ನ ಸಪ್ಲೈ ಆಗೋ ಹಾಲಿನ ಪ್ಯಾಕೆಟ್‌ನಲ್ಲಿ ಪರಿಷ್ಕೃತ ದರ ಸಾಧ್ಯತೆ

ಬೆಂಗಳೂರು: ಇಂದಿನಿಂದ ಹಾಲಿನ ದರ (Nandini Milk) ಏರಿಕೆಯಾಗಲಿದೆ. ಆದರೆ, ಮಂಗಳವಾರ ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ.

ಬೆಳಗ್ಗೆ ಸರಬರಾಜಾಗಿರುವ ಹಾಲನ್ನು ಹಳೇ ದರದಲ್ಲೇ ಮಾರಾಟ ಮಾಡಲಾಗಿದೆ. ಮಧ್ಯಾಹ್ನ ಸಪ್ಲೈ ಅಗುವ ಹಾಲಿನ ಪ್ಯಾಕೆಟ್‌ನಲ್ಲಿ ಪರಿಷ್ಕೃತ ದರ ಜಾರಿ ಆಗಲಿದೆ. ಇದನ್ನೂ ಓದಿ: ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?

ನಿನ್ನೆ ಹಳೇ ದರಕ್ಕೆ ಪ್ರಿಂಟ್ ಮಾಡಿ ಹಾಲನ್ನ ನಂದಿನಿ ಬೂತ್‌ಗಳಿಗೆ ಸಪ್ಲೈ ಮಾಡಲಾಗಿದೆ. ಮಧ್ಯಾಹ್ನ ಬರುವ ಹಾಲಿನಲ್ಲಿ ಏರಿಕೆ ಆಗಿರುವ ದರ ಜಾರಿಯಾಗಲಿದೆ. ಏನೇ ಆದರೂ ಹಾಲಿನ ದರ ಏರಿಕೆಯಿಂದ ಸಾರ್ವಜನಿಕರಿಗೆ ಭಾರೀ ಸಮಸ್ಯೆ ಆಗಲಿದೆ.

ಮಧ್ಯಾಹ್ನದಿಂದ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ. ಹಾಲು ಎಷ್ಟು ರೇಟ್ ಆಗಿದೆ ಅಂತಾ ಜನ ಕೇಳಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಒಂದು ದಿನಕ್ಕೆ ಎರಡು ಬಾರಿ ನಂದಿನಿ ಬೂತ್‌ಗಳಿಗೆ ಮತ್ತು ಅಂಗಡಿಗಳಿಗೆ ಹಾಲು ಸಪ್ಲೈ ಆಗಲಿದೆ. ಇದನ್ನೂ ಓದಿ: ದರ ಏರಿಕೆ ಜೊತೆಗೆ ಹೆಚ್ಚುವರಿ ಹಾಲು ಕಡಿತ?

ಬೆಳಗ್ಗೆ ಬಂದಿರುವ ಹಾಲಿನ ಪ್ಯಾಕೆಟ್‌ಗಳಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ. ಮಧ್ಯಾಹ್ನ ಬರುವ ಹಾಲಿನ ಪ್ಯಾಕೆಟ್‌ನಲ್ಲಿ ಪರಿಷ್ಕೃತ ದರ ಮುದ್ರಣ ಆಗಲಿದೆ.