ಟ್ರೆಂಡ್ ಆಯ್ತು ಮಿಡಿ ಫಿಂಗರ್ ರಿಂಗ್ ಫ್ಯಾಷನ್

ಮಿಡಿ ರಿಂಗ್ ಫ್ಯಾಷನ್ (Midi Ring Fashion) ಇದೀಗ ಟ್ರೆಂಡಿಯಾಗಿದೆ. ಅರೆರೆ… ಏನಿದು ಮಿಡಿ ರಿಂಗ್ ಫ್ಯಾಷನ್ ಎಂದುಕೊಳ್ಳುತ್ತಿದ್ದೀರಾ!. ಇದ್ಯಾವ ಬಗೆಯ ಫಿಂಗರ್ ರಿಂಗ್ ಫ್ಯಾಷನ್ ಎಂದುಕೊಂಡರೇ, ಇಲ್ಲಿದೆ ಒಂದಿಷ್ಟು ಡಿಟೇಲ್ಸ್!

ಹೌದು. ಕೈ ಬೆರಳುಗಳಿಗೆ ಉಂಗುರಗಳನ್ನು ಧರಿಸುವುದು ಕಾಮನ್. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಉಂಗುರಗಳನ್ನು ಧರಿಸುವುದು ಈ ಹಿಂದೆ ಫ್ಯಾಷನ್‌ನಲ್ಲಿತ್ತು. ಇದೀಗ ಈ ಫ್ಯಾಷನ್ ಒಂದು ಹೆಜ್ಜೆ ಮುಂದೆ ಹೋಗಿದೆ. ಅದೇ ಕೈ ಬೆರಳುಗಳ ಟಾಪ್‌ನಲ್ಲಿ ಅಥವಾ ಮಧ್ಯದಲ್ಲಿ ಧರಿಸುವುದು ಇದೀಗ ಫ್ಯಾಷನ್ ಆಗಿದೆ. ಅದರಲ್ಲೂ ಸೆಟ್ ಫಿಂಗರ್ ರಿಂಗ್‌ಗಳನ್ನು ಈ ರೀತಿ ಬೆರಳಿನ ಮಧ್ಯ ಭಾಗದಲ್ಲಿ ಧರಿಸುವುದು ಸ್ಟೈಲ್ ಆಗಿದೆ.

ಮೊದಲೆಲ್ಲಾ ಉಂಗುರಗಳನ್ನು ಬೆರಳುಗಳ ಕೆಳಭಾಗದಲ್ಲಿ ತಳದಲ್ಲಿ ಧರಿಸಿದರೇ ಸಾಕಿತ್ತು. ಇದೀಗ ಈ ಸ್ಟೈಲ್ ಜನರೇಷನ್‌ಗೆ ತಕ್ಕಂತೆ ಬದಲಾಗಿದೆ. ಇತರೇ ಉಂಗುರಗಳೊಂದಿಗೆ ತೆಳುವಾದ ಅಥವಾ ಆಕರ್ಷಕ ಉಂಗುರಗಳನ್ನು ಬೆರಳುಗಳ ಮಧ್ಯದಲ್ಲಿ ಧರಿಸುವುದು ಇಂದಿನ ಸ್ಟೈಲಿಂಗ್‌ನಲ್ಲಿ ಸೇರಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

ಕೈಗಳನ್ನು ಹೈಲೈಟ್ ಮಾಡಲು ಈ ಸ್ಟೈಲಿಂಗ್ ಸಾಕಷ್ಟು ಚಾಲ್ತಿಯಲ್ಲಿತ್ತು. ಬರಬರುತ್ತಾ, ಈ ಜನರೇಷನ್ ಹುಡುಗಿಯರನ್ನು ಸೆಳೆಯಿತು. ಇದಕ್ಕೆ ಪೂರಕ ಎಂಬಂತೆ ನಾನಾ ಬಗೆಯ ಫಿಂಗರ್ ರಿಂಗ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಫ್ಯಾಷನ್ ಸ್ಟೈಲಿಸ್ಟ್. ಅವರ ಪ್ರಕಾರ, ಇದು ಇಂದು ಕಾಲೇಜು ಹುಡುಗಿಯರ ಕ್ರೇಜಿ ಫ್ಯಾಷನ್ (Fashion) ಲಿಸ್ಟ್‌ನಲ್ಲಿದೆ. ಫ್ಯಾಷನಿಸ್ಟ್‌ಗಳು, ಮಾಡೆಲ್‌ಗಳು ಹಾಗೂ ತಾರೆಯರು ಈ ಫ್ಯಾಷನ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌ 

ಆನ್‌ಲೈನ್‌ನಲ್ಲಿ (Online) ಸಾಕಷ್ಟು ಬಗೆಯ ಮಿಡಿ ರಿಂಗ್ಸ್ (Midi Rings) ದೊರೆಯುತ್ತವೆ. ಇಡೀ ಸೆಟ್‌ನಿಂದಿಡಿದು ಸಿಂಪಲ್ ಸ್ಲಿಮ್ ರಿಂಗ್‌ಗಳು ಸಿಗುತ್ತವೆ. ಆಯಾ ಡಿಸೈನ್‌ಗೆ ತಕ್ಕಂತೆ ಇವುಗಳ ದರ ನಿಗಧಿಯಾಗಿರುತ್ತದೆ. ಇನ್ನು ಅಂಗಡಿಗಳಲ್ಲಿ ಅದರಲ್ಲೂ ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುವ ಇವುಗಳ ಬೆಲೆ ಆನ್‌ಲೈನ್ ಶಾಪ್‌ಗಳಿಗಿಂತ ತುಸು ಕಡಿಮೆ.

ಫಿಂಗರ್ ರಿಂಗ್ ಸ್ಟೈಲಿಂಗ್ ಹೀಗೆ..
* ಸ್ಲಿಮ್ ಸೆಟ್ ಮಿಡಿ ರಿಂಗ್ಸ್ ನಾನಾ ಬಗೆಯಲ್ಲಿ ಧರಿಸಬಹುದು.
* ಸದಾ ಧರಿಸಕೂಡದು. ರಕ್ತ ಸಂಚಾರಕ್ಕೆ ಧಕ್ಕೆಯಾಗಬಹುದು.
* ಅಡ್ಜಸ್ಟೇಬಲ್ ಮಿಡಿ ರಿಂಗ್ಸ್ ಖರೀದಿ ಉತ್ತಮ.