#MeeToo- ನಟಿ ಶೃತಿ ಹರಿಹರನ್ ಬೆನ್ನಿಗೆ ನಿಂತ ಶ್ರದ್ಧಾ ಶ್ರೀನಾಥ್!

ಬೆಂಗಳೂರು: ನಟಿ ಶೃತಿ ಹರಿಹರನ್ ಬಳಿಕ ಆಪರೇಷನ್ ಅಲಮೇಲಮ್ಮ ನಟಿ ಶ್ರದ್ಧಾ ಶ್ರೀನಾಥ್ ಕೂಡಾ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಬಸ್ ಪ್ರಯಾಣಿಕನೊಬ್ಬನ ಅನುಚಿತ ವರ್ತನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಾನು ಕೊಚ್ಚಿಗೆ ಹೋಗುವಾಗ ಗಾಢ ನಿದ್ರೆಯಲ್ಲಿದ್ದೆ. ಯಾರೋ ಮೈ ಮುಟ್ಟಿದ ಅನುಭವವಾಗಿದ್ದಕ್ಕ ಇದ್ದಕ್ಕಿದ್ದ ಹಾಗೆ ಎಚ್ಚರವಾಯ್ತು. ಸಹ ಪ್ರಯಾಣಿಕ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದನು. ಇದಕ್ಕೆಲ್ಲ ನನ್ನ ಬಳಿ ಸಾಕ್ಷಿ ಇಲ್ಲ. ಆದ್ರೆ ಇವೆಲ್ಲ ಕೆಟ್ಟ ನೆನಪುಗಳು ಎಂದು ನೋವು ತೋಡಿಕೊಂಡಿದ್ದಾರೆ.

ಅಲ್ಲದೆ ಆತ ನನ್ನ ತೊಡೆಯಲ್ಲಿ ಕೈ ಹಾಕಿದಾಗ ನಾನು ಸೆಲ್ಫಿ ತೆಗೆದುಕೊಳ್ಳಬೇಕಾಗಿತ್ತೋ ಏನೋ.. ನಿಮಗೆ ಎಲ್ಲದಕ್ಕೂ ಸಾಕ್ಷ್ಯ ಬೇಕಲ್ವೆ ಅಂತಾ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಶ್ರುತಿ ಹರಿಹರನ್‍ಗಾದ ಕೆಟ್ಟ ಅನುಭವದ ಬಗ್ಗೆ ನನಗೆ 2016 ನವಂಬರ್‍ನಲ್ಲೆ ಗೊತ್ತಿತ್ತು. ಈ ಹಿಂದೆ ನಾವಿಬ್ಬರು ಶೋನಲ್ಲಿ ಒಟ್ಟಿಗೆ ಪಾಲ್ಗೊಂಡಾಗ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರು. ಆದ್ರೇ ಅಲ್ಲಿ ಆಕೆ ಯಾರ ಹೆಸರು ಪ್ರಸ್ತಾಪ ಮಾಡಿರಲಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ:  ಪಬ್ಲಿಕ್ ಟಿವಿಯಲ್ಲಿ ಶೃತಿ V/S ಅರ್ಜುನ್: ಇಬ್ಬರ ಮಾತುಕತೆಯ ಪೂರ್ಣ ಸಂಭಾಷಣೆ ಓದಿ

ನಟಿ ಸಂಜನಾ ಗಲ್ರಾಣಿ ಬೆನ್ನಲ್ಲೇ ಶೃತಿ ಹರಿಹರನ್ ಕೂಡ #MeToo ಅಭಿಯಾನಕ್ಕೆ ಬೆಂಬಲ ಸೂಚಿಸಿ, ತಮಗಾದ ಅನುಭವವನ್ನು ಮ್ಯಾಗಜೀನ್ ಒಂದರ ಸಂದರ್ಶನದ ವೇಳೆ ಹಂಚಿಕೊಂಡಿದ್ದರು, ‘ವಿಸ್ಮಯ’ ಚಿತ್ರದ ರಿಹರ್ಸಲ್ ವೇಳೆ ತನಗೆ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಪೇಸ್ ಬುಕ್ ನಲ್ಲೂ ಕೂಡ ಬರೆದುಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು: ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *