ಪಾಲಿಕೆ ಮೇಲಿನ ಕನ್ನಡ ಧ್ವಜವನ್ನು ತೆಗೆಯಿರಿ – ಭಾಷಾ ವಿಷಬೀಜ ಬಿತ್ತಲು MES ಯತ್ನ

-ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ
-ಕುಂದಾನಗರಿಯಲ್ಲಿ ಮತ್ತೆ ಪುಂಡಾಟಿಕೆ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಭಾಷಾ ವಿಷಬೀಜ ಬಿತ್ತಲು ಯತ್ನಿಸಿಸುತ್ತಿದೆ.

ಇಂದು ಬೆಳಗಾವಿ ನಗರದ ಸಂಭಾಜಿ ವೃತ್ತದಲ್ಲಿ ಜಮಾವಣೆಗೊಂಡ ಎಂಇಎಸ್ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ ತಳ್ಳಿ ಗುಂಡಾವರ್ತನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಕೈಯಲ್ಲಿ ಲಾಠಿ ಹಿಡಿಯುತ್ತಿದಂತೆ ಓಡಿ ಹೋಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಎಂಇಎಸ್ ಕಿಡಿಗೇಡಿಗಳು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

ಬೆಳಗಾವಿಯ ನಾಮ ಫಲಕಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಜೊತೆಗೆ ಮರಾಠಿ ಭಾಷೆ ಬಳಕೆ ಮಾಡಬೇಕು. ಪಾಲಿಕೆ ಮೇಲಿನ ಕನ್ನಡ ಧ್ವಜವನ್ನು ತೆಗೆಯಬೇಕು. ಇಲ್ಲವೇ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಲು ಅವಕಾಶ ಮಾಡಿಕೊಡಬೇಕು. ಎಂದು ಮರಾಠಿ ಭಾಷಾ ಅಲ್ಪಸಂಖ್ಯಾಂತರ ಹಕ್ಕೋತಾಯ ಮಧ್ಯವರ್ತಿ ಕುರಿತಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿಭಟನೆ ನಡೆಸಿದೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೊರಟಿದ್ದ ಎಂಇಎಸ್ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ನಡು ರಸ್ತೆಯಲ್ಲಿಯೇ ಕುಳಿತು ಎಂಇಎಸ್ ಪ್ರತಿಭಟನೆ ನಡೆಸಲು ಪ್ರಾರಂಭಿಸಿತ್ತು. ಸ್ಥಳಕ್ಕೆ ಮನವಿ ಸ್ವೀಕರಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಶೋಕ್ ದಡಗುಂಟಿಯವರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಮೆರೆದಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

Comments

Leave a Reply

Your email address will not be published. Required fields are marked *