ವಜ್ರ ವ್ಯಾಪಾರಿಯಿಂದ ದೀಪಾವಳಿ ಗಿಫ್ಟ್: 600 ನೌಕರರಿಗೆ ಕಾರು, 900 ಜನರಿಗೆ ಎಫ್‍ಡಿ

ಸೂರತ್: 2017ರಲ್ಲಿ ತನ್ನ ನೌಕರರಿಗೆ ವಿಶೇಷ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದ್ದ ವಜ್ರ ವ್ಯಾಪಾರಿ ಮತ್ತೊಮ್ಮೆ ಭಾರೀ ಬೆಲೆಯ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ. ದೀಪಾವಳಿ ಬೋನಸ್ ರೂಪದಲ್ಲಿ ತನ್ನ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡುತ್ತಿದ್ದಾರೆ.

ಹರಿಕೃಷ್ಣ ಎಕ್ಸ್ ಪೋರ್ಟ್ಸ್ ಕಂಪನಿಯ ಮಾಲೀಕ ಸಾವಜಿ ಡೊಲಕಿಯಾ ನೌಕರರನ್ನು ಪ್ರೋತ್ಸಾಹಿಸಲು ಕಾರುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. 600 ಜನರು ತಮಗೆ ಕಾರು ಬೇಕೆಂದು ಮನವಿ ಮಾಡಿದ್ರೆ, ಉಳಿದ 900 ನೌಕರರು ಅದೇ ಹಣವನ್ನು ಎಫ್‍ಡಿ ಮಾಡಬೇಕೆಂದು ಕೇಳಿಕೊಂಡರು. ಕಂಪನಿಯ ನೌಕರರ ಇಚ್ಚೆಯನುಸಾರವಾಗಿ ಬೋನಸ್ ನೀಡಲಾಗುತ್ತಿದೆ. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿದೆ. ಮೊದಲ ಬಾರಿಗೆ ನಮ್ಮ ಕಂಪನಿಯ ನಾಲ್ವರು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಗಿಫ್ಟ್ ಪಡೆಯಲಿದ್ದಾರೆ ಎಂದು ಸಾವಜಿ ಡೊಲಕಿಯಾ ತಿಳಿಸಿದ್ದಾರೆ.

600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಸಿಗಲಿದೆ. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. ಈ ಬೆಂಜ್ ಕಾರನ್ನು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್‍ರ ಮೂಲಕ ಕೊಡಿಸಲಾಗಿತ್ತು.

2011ರಿಂದಲೂ ಡೊಲಕಿಯಾವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಬೋನಸ್ ನೀಡಲು ಪ್ರಾರಂಭಿಸಿದ್ದಾರೆ. 2015ರಲ್ಲಿ ಹಬ್ಬದ ಪ್ರಯುಕ್ತ 491 ಕಾರ್ ಮತ್ತು 200 ಫ್ಲ್ಯಾಟ್‍ಗಳನ್ನು ಗಿಫ್ಟ್ ನೀಡಿದ್ದರು. 2014ರಲ್ಲಿ ಕಂಪನಿಯ ನೌಕರರಿಗೆ 50 ಕೋಟಿ ರೂ. ಹಂಚಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *