ಬೆಂಗಳೂರು: ಬಿಲ್ಡಪ್‍ಗಾಗಿ ಪೊಲೀಸರಿಗೆ ಆವಾಜ್ ಹಾಕಿದ್ದ ಮೆಂಟಲ್ ಮಂಜನನ್ನು ನಗರದ ಅವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ಅವಲಹಳ್ಳಿಯಲ್ಲಿ ನಡೆದಿದ್ದ ಕುಳ್ಳ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ಹಾಗೂ ಡಿವೈಎಸ್‍ಪಿಯನ್ನು ನಿಂದಿಸಿ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಕುಳ್ಳ ವೆಂಕಟೇಶ್ ಮೇಲೆ ಮೊದಲು ಹಲ್ಲೆ ನಡೆಸಿದ್ದು ನಾನು, ಆದರೆ ಪೊಲೀಸರು ಅನಿಲ್‍ನ್ನು ಬಂಧಿಸಿದ್ದಾರೆ ಎಂದು ಮೆಂಟಲ್ ಮಂಜ ಬಿಲ್ಡಪ್ ತೆಗೆದುಕೊಂಡಿದ್ದನು.

ಅಂದಹಾಗೇ ಪ್ರಕರಣದಲ್ಲಿ ನಾನು ಎ1 ಆರೋಪಿ ಎಂದು ಧೈರ್ಯದಿಂದ ಹೇಳಿದ್ದಲ್ಲದೇ ಜೊತೆಗೆ ಎಸ್‍ಪಿ ಹಾಗೂ ಡಿವೈಎಸ್‍ಪಿಯನ್ನು ನಿಂದಿಸಿ, ಖಾಕಿ ಧರಿಸಿದರೆ ಸಾಲದು ನನ್ನನ್ನು ಬಂಧಿಸಿ ಎಂದು ಆವಾಜ್ ಹಾಕಿದ್ದನು. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

ಹೀಗಾಗಿ ಕೂಡಲೇ ಒಂದು ತಂಡ ರಚಿಸಿ ಮಂಜನಿಗೆ ಬಲೆ ಬೀಸಿದ ಪೊಲೀಸರು, ಕುಳ್ಳ ವೆಂಕಟೇಶ್ ಕೊಲೆಯಲ್ಲಿ ಮಂಜನ ಪಾತ್ರ ಇಲ್ಲದಿದ್ದರೂ, ಪುಕ್ಸಟ್ಟೆ ಬಿಲ್ಡಪ್ ಕೊಟ್ಟ ಮಂಜನನ್ನು ಅವಲಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರನ ಪತ್ನಿ, ಮಕ್ಕಳ ಆತ್ಮಹತ್ಯೆ – ಇದು ‘ಕೊಲೆಗೆಡುಕ ಸರಕಾರ’ ಅಂತ ಹೆಚ್‍ಡಿಕೆ ಕಿಡಿ

Leave a Reply