ಮುಂಬೈ: ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್ ಹೇಳಿದ್ದಾರೆ.
ಲಿಂಗ ತಾರತಮ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಕ್ರಿಯವಾಗಿ ಏನನ್ನೂ ಮಾಡದಿದ್ದರೂ, ತಮ್ಮ ನಿಯಮಗಳನ್ನು ತೊಡೆದುಹಾಕುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲದಕ್ಕೂ ಪುರುಷರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಈ ನಿಯಮಗಳಲ್ಲಿ ಬೆಳೆದು ಬಂದಿದ್ದಾರೆ ಎಂದು ವಿವರಿಸಿದ ಅವರು, ಪುರುಷ ಮತ್ತು ಮಹಿಳೆಯರ ಕೆಲಸ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!
ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.
ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು. ಪುರುಷರಿಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಆದರೆ ಇದು ಸತ್ಯ. ಮಹಿಳೆಯರು ಬೆಳೆದಂತೆ ಅವರ ಬುದ್ದಿಶಕ್ತಿ ಹೆಚ್ಚಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

ನನ್ನ ಮನೆಯಲ್ಲಿ ಎಲ್ಲ ಮಹಿಳೆಯರು ಪವರ್‌ಫುಲ್ ಆಗಿದ್ದಾರೆ. ನನ್ನ ತಾಯಿ, ಅಜ್ಜಿ ಎಲ್ಲರು ಮಾತೃಪ್ರಧಾನವಾಗಿ ಮನೆಯನ್ನು ನಡೆಸುತ್ತಾರೆ. ಇದರಿಂದ ನಮ್ಮ ಮನೆಯಲ್ಲಿ ಪುರುಷರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತ ಸಂತೋಷವಾಗಿದ್ದಾರೆ. ಅವರು ಕಾಳಜಿ ವಹಿಸುವುದು, ನಮ್ಮನ್ನು ನೋಡಿಕೊಳ್ಳುವ ರೀತಿ ನೋಡಿದರೆ ಸಂತೋಷವಾಗುತ್ತೆ ಎಂದು ತಿಳಿಸಿದ್ದಾರೆ.

Leave a Reply