ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್‌ ಕುಮಾರ್‌

ಬೆಂಗಳೂರು: ಯಾರು ಏನೇ ಹೇಳಲಿ, ವೀಕೆಂಡ್ ಕರ್ಫ್ಯೂಯೇ ಇರಲಿ, ನಿಷೇಧಾಜ್ಞೆಯೇ ಜಾರಿಯಾಗಿರಲಿ, ಅರೆಸ್ಟೇ ಮಾಡಿಬಿಡಲಿ ನಾವು ಮಾತ್ರ ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕಾಂಗ್ರೆಸ್ಸಿಗರು ಹಠಕ್ಕೆ ಬಿದ್ದಿದ್ದಾರೆ.

ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಈಗಾಗಲೇ ಕನಕಪುರದಲ್ಲಿ ಬೀಡುಬಿಟ್ಟಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಪಾದಯಾತ್ರೆಗೆ ಆರಂಭಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್‌ ಕುಮಾರ್‌ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ:  ಇಲ್ಲಿ ಮೇಕೆದಾಟು ಜಪ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್‌ ದೋಸ್ತಿ: ಹೆಚ್‌ಡಿಕೆ

ಇಂದು ತಮ್ಮ ಇಷ್ಟ ದೈವ ಕಬ್ಬಾಳಮ್ಮ, ಜಾಮೀಯಾ ಮಸೀದಿಯಲ್ಲಿ ಡಿಕೆ ಶಿವಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಗಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆದಿದೆ. ಭಾನುವಾರ ಏನೆಲ್ಲಾ ಮಾಡಬೇಕು? ಪೊಲೀಸರು ಬಂಧಿಸಲು ಬಂದರೆ ಹೇಗೆ? ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ತಂದೆ ಕೊರೊನಾಗೆ ಬಲಿ

ಈ ಮಧ್ಯೆ ಪಾದಯಾತ್ರೆ ಮಾಡುವಂತಿಲ್ಲ ಎಂದು ರಾಮನಗರ ಎಸ್‍ಪಿ ನೋಟಿಸ್‌ ಜಾರಿ ಮಾಡಿದ್ದಾರೆ. ಕೈ ನಾಯಕರ ಮನವೊಲಿಸಲು ಅರ್ಧ ಗಂಟೆ ಪ್ರಯತ್ನಿಸಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ನಾಯಕರು ಜಗ್ಗಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೊಪ್ಪಳದಿಂದ ನೂರಾರು ಕಾರ್ಯಕರ್ತರು ಬರುತ್ತಿದ್ದಾರೆ. ಇದನ್ನೂ ಓದಿ: ಅಮಲು ಪದಾರ್ಥ ಸೇವಿಸಿ ರಂಪಾಟ – ಉಡುಪಿ ಪೊಲೀಸರಿಗೆ ವಿದ್ಯಾರ್ಥಿಗಳಿಂದ ಅವಾಜ್

ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಅತ್ತ ಪೊಲೀಸರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯಾದ್ಯಂತ ಬಂದೋಬಸ್ತ್ ಕೈಗೊಂಡಿದ್ದು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *