ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

ರಾಮನಗರ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆರೋಗ್ಯ ಅಧಿಕಾರಿಯ ಮೇಲೆಯೇ ಗರಂ ಆದ ಪ್ರಸಂಗ ನಡೆದಿದೆ.

ಮೊದಲ ದಿನದ ಪಾದಯಾತ್ರೆಯ ಬಳಿಕ ಕನಕಪುರದ ದೊಡ್ಡಾಲಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಆರೋಗ್ಯ ಅಧಿಕಾರಿಗಳು, ಸರ್‌ ರ‍್ಯಾಂಡಮ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

ಇದಕ್ಕೆ ಗರಂ ಆದ ಡಿಕೆಶಿ, ನಾನು ಫಿಟ್‌ ಆಂಡ್‌ ಫೈನ್‌ ಆಗಿದ್ದೇನೆ. ಈಗ ಪಾದಯಾತ್ರೆ ಮಾಡಿದ್ದು ನನ್ನ ಆರೋಗ್ಯ ಚೆನ್ನಾಗಿದೆ. ಸರ್ಕಾರ ಪಾದಯಾತ್ರೆ ನಿಲ್ಲಿಸಲು ಮಾಡಿರುವ ಷಡ್ಯಂತ್ರ ಎಂದು ಹೇಳಿ ಆರೋಗ್ಯ ಅಧಿಕಾರಿಗಳ ಮೇಲೆಯೇ ಸಿಟ್ಟು ಹೊರ ಹಾಕಿದರು.

ರಾತ್ರಿ ಶಿವಕುಮಾರ್ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿ, ನಾನು ಈ ಗಡ್ಡ ಬಿಟ್ಟಿದ್ದು ತಿಹಾರ್ ಜೈಲಿನಲ್ಲಿ. ಈ ಗಡ್ಡಕ್ಕೆ ನೀವೇ ಮುಕ್ತಿ ಕೊಡಬೇಕು.  ನಾನು ಮತ ಕೇಳಲು ಬರುವುದಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಮತ್ತೆ ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ತಾಕತ್ತಿದ್ದರೆ ಪೊಲೀಸರು ಕೇಸ್ ಹಾಕಲಿ. ಸಿಎಂ ಬೊಮ್ಮಾಯಿಯವರೇ ನಮ್ಮನ್ನು ಜೈಲಿಗೆ ಕಳಿಸಿ ನೀವು ಹಾಲು ಕುಡಿಯಿರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರ ಬದುಕಿದ್ಯಾ, ಸತ್ತಿದ್ಯಾ ಅನ್ನೋದನ್ನ ತೋರಿಸ್ತೀವಿ: ಸಚಿವ ಸುಧಾಕರ್

ಎರಡನೇ ದಿನದ ಪಾದಯಾತ್ರೆ:
ಎರಡನೇ ದಿನ ಬೆಳಗ್ಗೆ 8:30ಕ್ಕೆ ದೊಡ್ಡಾಲಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಇಂದು ಒಟ್ಟು 16 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಮೊದಲಾರ್ಧ 8 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ ಮಾದಪ್ಪನ ದೊಡ್ಡಿ, ಕರಿಯಣ್ಣ ದೊಡ್ಡಿಯಲ್ಲಿ ಭೋಜನ ವಿರಾಮದ ಬಳಿಕ 8 ಕಿ.ಮೀ. ಪಾದಯಾತ್ರೆ ನಡೆದು ಸಂಜೆ ಕನಕಪುರದಲ್ಲಿ ಮುಕ್ತಯವಾಗಲಿದೆ. ಇಲ್ಲೇ ರಾತ್ರಿ ಸಭೆ ನಡೆಯಲಿದೆ.


ಭಾಗಿಯಾಗುತ್ತಿಲ್ಲ  ಸಿದ್ದರಾಮಯ್ಯ:
ಮೊದಲ ದಿನದದ ಪಾದಯಾತ್ರೆ ವೇಳೆ ಸಿದ್ದರಾಮಯ್ಯಗೆ ಕೊಂಚ ಸುಸ್ತು ಕಾಡಿತ್ತು. ಕೊರೊನಾ ಬೂಸ್ಟರ್ ಡೋಸ್ ಪಡೆದಿದ್ದ ಸಿದ್ದರಾಮಯ್ಯಗೆ ಸಹಜವಾಗಿ ಮೈಕೈ ನೋವು, ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಂಗಮದಿಂದ ಬೆಂಗಳೂರಿಗೆ ವೈದ್ಯರ ಸಲಹೆ ಮೇರೆಗೆ ವಾಪಸಾಗಿದ್ದರು. ಇಂದು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಸಿದ್ದರಾಮಯ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *