ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ ಈಗಲಾದರೂ ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ – ಕಾಂಗ್ರೆಸ್‍ಗೆ ಬಿಜೆಪಿ ಪ್ರಶ್ನೆ

ಬೆಂಗಳೂರು: ನ್ಯಾಯಾಲಯವೇ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಗೆ ಆಕ್ಷೇಪ ವ್ಯಕ್ತಪಡಿಸಿದೆ ಈಗಲಾದರೂ ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ ಅಥವಾ ಸೂಪರ್‌ಸ್ಪ್ರೆಡರ್‌ ಕಾಂಗ್ರೆಸ್ ಎನಿಸಿಕೊಳ್ಳುತ್ತೀರಾ? ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಕಾಂಗ್ರೆಸ್‍ಗೆ ಚಾಟಿ ಬೀಸಿದೆ.

ಟ್ವೀಟ್‍ನಲ್ಲಿ ಏನಿದೆ?
ಕಾಂಗ್ರೆಸ್ ಹಮ್ಮಿಕೊಂಡಿರುವ ಕೋವಿಡ್‍ಯಾತ್ರೆ ಮತ್ತು ಕೋವಿಡ್ ಸೋಂಕಿತರು ಎಚ್.ಎಂ. ರೇವಣ್ಣ, ಸಿ.ಎಂ. ಇಬ್ರಾಹಿಂ, ಎನ್.ಎಚ್. ಶಿವಶಂಕರ ರೆಡ್ಡಿ ಕಾಂಗ್ರೆಸ್ ಹಿರಿಯ ನಾಯಕರೂ ಯಾತ್ರೆ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೂ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಿಮ್ಮತ್ತು ನೀಡುತ್ತಿಲ್ಲ. ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ನೀವು ಮೇಕೆದಾಟು ಹೋರಾಟ ನಡೆಸಿ. ಆದರೆ ಅದಕ್ಕೆ ಸಮಯ ಸಂದರ್ಭದ ಅರಿವು ಬೇಡವೇ? ಕೋವಿಡ್‍ಯಾತ್ರೆಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ. ಎಚ್ಚೆತ್ತುಕೊಳ್ಳಿ, ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣದಾಟಿಸಬೇಡಿ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

ಮೇಕೆದಾಟು ಪಾದಯಾತ್ರೆಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯವಿತ್ತೇ ಎಂದು ಕೆಪಿಸಿಸಿಯನ್ನು ಪ್ರಶ್ನಿಸಿದೆ. ಕಾಂಗ್ರೆಸ್ಸಿಗರೇ, ಜನರ ಭಾವನೆಯನ್ನು ಧಿಕ್ಕರಿಸಿದ್ದಿರಿ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಿರಿ, ನ್ಯಾಯಾಲಯಕ್ಕಾದರೂ ತಲೆಬಾಗುವಿರಾ? ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬ ಸರ್ಕಾರದ ಮನವಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ. ನಿಮ್ಮ ವೈಯಕ್ತಿಕ ಹಠ ಸಾಧನೆಗಾಗಿ ಜನರನ್ನೇಕೆ ಸಂಕಷ್ಟಕ್ಕೆ ದೂಡುತ್ತಿದ್ದೀರಿ? ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಈಗಲಾದರೂ ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ ಅಥವಾ ಸೂಪರ್‌ಸ್ಪ್ರೆಡರ್‌  ಎನಿಸಿಕೊಳ್ಳುತ್ತೀರಾ? ನ್ಯಾಯಾಲಯ ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ಪ್ರತಿಭಟನೆ ನಮ್ಮ ಹಕ್ಕು ಎಂದು ಸಿದ್ದರಾಮಯ್ಯ ಹಠ ಮುಂದುವರಿಸುತ್ತಿದ್ದಾರೆ. ನ್ಯಾಯಾಲಯದ ಮೇಲೂ ಕಾಂಗ್ರೆಸ್ಸಿಗರಿಗೆ ಗೌರವ ಇಲ್ಲವೇ?. ಇದನ್ನೂ ಓದಿ: ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ: ನಾರಾಯಣ ಗೌಡ

Comments

Leave a Reply

Your email address will not be published. Required fields are marked *