ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ

ಸೋಶಿಯಲ್ ಮೀಡಿಯಾ (Social Media) ವೇದಿಕೆ ಉಪಯೋಗಿಸಿಕೊಂಡು ಡಿಜಿಟಲ್ ದಾಳಿಕೋರರ ಪ್ರಮಾಣ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳ ಮೇಲೆ ಇಷ್ಟ ಕಷ್ಟ ಕೋಪ ತಾಪವನ್ನ ಈ ಮೂಲಕ ಹೊರಹಾಕಲಾಗುತ್ತದೆ. ಅವರ ಕಾರ್ಯವನ್ನು ಟೀಕಿಸಲಾಗುತ್ತದೆ. ಇಂಥಹ ಟೀಕೆ ಟಿಪ್ಪಣಿಗಳಿಂದ, ಟ್ರೋಲ್ ಬ್ಯಾಡ್ ಕಾಮೆಂಟ್ಸ್‌ಗಳಿಗೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಕೂಡ ಹೊರತಾಗಿಲ್ಲ.

ಇದೀಗ ಹೈದ್ರಾಬಾದ್‌ನಲ್ಲಿ ‘ಬ್ಲಡ್ ಡೊನೇಷನ್ ಡ್ರೈವ್‌ ʼ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಸೋಶಿಯಲ್ ಮೀಡಿಯಾ ದಾಳಿಕೋರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಕ್ತ ವೇದಿಕೆಯಲ್ಲಿ ತಮ್ಮ ವಿರುದ್ಧ ಕೆಟ್ಟ ಕಾಮೆಂಟ್ ಹಾಗೂ ಟ್ರೋಲ್ ಮಾಡುವವರ ವಿರುದ್ಧ ಚಿರಂಜೀವಿ ಮುಕ್ತವಾಗಿ ಗುಡುಗಿದ್ದಾರೆ.

ಪರೋಕ್ಷವಾಗಿ ಟ್ರೋಲ್‌ಗಳಿಗೆಲ್ಲ ಹೆದರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಚಿರಂಜೀವಿಯ ಕೌಟುಂಬಿಕ ವಿಚಾರಗಳು , ರಾಜಕೀಯ ಜೀವನ ಹಾಗೂ ಸಿನಿಮಾಗಳ ವಿಚಾರ ಸದಾ ಟ್ರೋಲ್ ಆಗುತ್ತದೆ. ಇದೆಲ್ಲವೂ ತಮಗೆ ಗೊತ್ತು ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ ಮೆಗಾಸ್ಟಾರ್. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಕೊಪ್ಪಳ ಮೂಲದ ಓರ್ವ ವಶಕ್ಕೆ

ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದೇನು ?
ಸೋಶಿಯಲ್ ಮೀಡಿಯಾ ಮೂಲಕ ನಮಗೆ ಅಟ್ಯಾಕ್ ಮಾಡ್ತಾನೇ ಇರ್ತಾರೆ, ಅದಕ್ಕೆಲ್ಲ ನಾನು ಪ್ರತಿಕ್ರಿಯೆ ಮಾಡಲ್ಲ. ಜನರು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನವೇ ನನಗೆ ರಕ್ಷಾ ಕವಚ. ಇದರ ಹೊರತಾಗಿ ನಾನು ಮಾತನಾಡುವ ಅವಷ್ಯಕತೆ ಇಲ್ಲ. ನಾವು ಮಾಡುವ ಕೆಲಸವೇ ಮಾತಾಡುತ್ತೆ, ಇದೇ ಸತ್ಯ.