ಪ್ರಭಾಸ್, ನಿಹಾರಿಕಾ ಮದುವೆ ಆಗ್ತಾರಾ: ಸುದ್ದಿಗೆ ಸ್ಪಷ್ಟನೆ ಕೊಟ್ಟ ಮೆಗಾಸ್ಟಾರ್

ಹೈದರಾಬಾದ್: ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಬಾಹುಬಲಿ ನಟ ಪ್ರಭಾಸ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಕುರಿತು ಸುದ್ದಿ ಕೇಳಿಬಂದಿತ್ತು. ಈ ಕುರಿತು ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರೇ ಇಬ್ಬರ ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಹಾಟ್ ಸುದ್ದಿಯಾಗಿದ್ದ ನಿಹಾರಿಕಾ, ಪ್ರಭಾಸ್ ಜೋಡಿಯ ಮದುವೆಯ ವಿಷಯವನ್ನು ಚಿರಂಜೀವಿ ಅಲ್ಲಗೆಳೆದಿದ್ದಾರೆ. ಪ್ರಭಾಸ್ ಹಾಗೂ ನಿಹಾರಿಕಾ ಮದುವೆ ಕುರಿತು ಚರ್ಚೆಯೇ ನಡೆದಿಲ್ಲ. ಆದರೂ ಇಂತಹ ಸುದ್ದಿಗಳು ಪ್ರಚಾರ ಪಡೆದಿವೆ. ಇಂತಹ ಸುದ್ದಿಗಳು ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ. ಈ ಹಿಂದೆಯೂ ಹಲವು ರೂಮರ್ ಗಳು ಬಂದಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಹಾರಿಕಾ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರಕಂಡ `ಒಕ ಮನಸು’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಪಾದರ್ಪಣೆ ಮಾಡಿದ್ದಾರೆ. ಈ ಮೊದಲು ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆ ಆಗುತ್ತಾರೆ ಎಂದು ಸುದ್ದಿಯಾಗಿತ್ತು. ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿ ಮ್ಯಾಚ್ ಆಗುತ್ತದೆ. ಹೀಗಾಗಿ ಮದುವೆಯಾಗುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ ಇಬ್ಬರು ಈ ಕುರಿತು ಸ್ಪಷ್ಟನೆ ನೀಡಿ ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *