ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ

ಲಕ್ನೋ: ಮೀರತ್‌ ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ರಸ್ತೋಗಿ (Muskan Rastogi) ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ವರದಿಯಾಗಿದೆ.

ಹೌದು. ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದ ಆರೋಪಿ ಮುಸ್ಕಾನ್‌ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಜೈಲಾಧಿಕಾರಿಗಳು ಮಹಿಳಾ ವೈದ್ಯರನ್ನ ಕರೆಸಿ, ತಪಾಸಣೆ ಮಾಡಿದ್ರು. ಆಗ‌ ಮುಸ್ಕಾನ್‌ ಗರ್ಭಿಣಿ (Pregnant) ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಇಂದು (ಏ.11) ಸಹ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಟ್ರಾಸೌಂಡ್‌ (Ultrasound Test) ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಮುಸ್ಕಾನ್‌ ಗರ್ಭ ಧರಿಸಿರುವುದು ಅಲ್ಟ್ರಾಸೌಂಡ್‌ ಟೆಸ್ಟ್‌ನಲ್ಲಿ ದೃಢಪಟ್ಟಿದೆ. ಸದ್ಯ ವೈದ್ಯರು ಹೆರಿಗೆಗೆ 4 ರಿಂದ 6 ವಾರಗಳ ಸಮಯ ನೀಡಿದ್ದಾರೆ. ಈ ಹಿನ್ನೆಲೆ ಜೈಲಿನಲ್ಲಿ ಗರ್ಭಿಣಿಯರಿಗೆ ನೀಡುವ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.

UP Murder

ಸೌರಬ್‌ ಕುಟುಂಬಸ್ಥರಿಂದ ಆಕ್ಷೇಪ
ಇನ್ನೂ ಮುಸ್ಕಾನ್‌ ಗರ್ಭಿಯಾದ ವಿಷಯ ತಿಳಿದು ಪತ್ನಿಯಿಂದ ಕೊಲೆಯಾದ ಸೌರಭ್‌ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸೌರಭ್‌ನದ್ದಲ್ಲ, ಒಂದು ವೇಳೆ ಸೌರಭ್‌ನದ್ದೇ ಆಗಿದ್ದರೆ, ನಾವೇ ದತ್ತು ಪಡೆದು ಸಾಕುತ್ತೇವೆ. ಆದ್ರೆ ಆ ಮಗು ಸೌರಭ್‌ನದ್ದಾ ಅಥವಾ ಅವಳ ಪ್ರಿಯಕರ ಸಾಹಿಲ್‌ನದ್ದಾ ಎಂಬುದು ದೃಢವಾಗಬೇಕು. ಅದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಬೇಕು ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

Meerut Murder

ಕೊಲೆಗೆ ಕಾರಣ ಏನು?
ಮುಸ್ಕಾನ್‌, ಪ್ರಿಯಕರ ಸಾಹಿಲ್‌ ಒಂದೇ ಶಾಲೆಯಲ್ಲಿ ಓದಿದ್ದರು. ತಮ್ಮ ಶಾಲೆಯ ವಾಟ್ಸಪ್‌ ಗ್ರೂಪ್‌ನಲ್ಲಿದ್ದ ಇವರು 2019ರಿಂದಲೂ ಪ್ರೀತಿಸಲು ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಮೀರತ್‌ನ ಮಾಲ್‌ನಲ್ಲಿ ನಡೆದ ಪಾರ್ಟಿ ವೇಳೆ ಭೇಟಿಯಾಗಿದ್ದರು. ಬಳಿಕ ಇಬ್ಬರ ಪ್ರೇಮ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಂಬಂಧಕ್ಕೆ ಸೌರಭ್‌ ಅಡ್ಡಿಯಾಗುತ್ತಾನೆಂದು ಮುಗಿಸುವ ಪ್ಲ್ಯಾನ್‌ ಮಾಡಿದರು. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು

ಕೊಲೆ ಮಾಡಿದ್ದು ಹೇಗೆ?
ಸೌರಭ್‌ ತನ್ನ ತಾಯಿ ಮನೆಗೆ ಹೋಗಿದ್ದ. ಬರುವಾಗ ಒಂದಷ್ಟು ಖಾದ್ಯಗಳನ್ನೂ ತಂದಿದ್ದ. ಆದ್ರೆ ಮುಸ್ಕಾನ್‌ ಮತ್ತೆ ಆಹಾರವನ್ನು ಬಿಸಿ ಮಾಡುವಾಗ ಅದರಲ್ಲಿ ಮತ್ತು ಬರುವ ಔಷಧಿ ಬೆರಸಿದ್ದಳು. ಆ ಆಹಾರ ತಿನ್ನುತ್ತಿದ್ದಂತೆ ಸೌರಭ್‌ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಬಳಿಕ ತನ್ನ ಪ್ರಿಯಕರ ಸಾಹಿಲ್‌ನನ್ನು ಕರೆದು ಇಬ್ಬರೂ ಸೇರಿ ಕೊಲೆ ಮಾಡಿ ಮುಗಿಸಿದ್ರು. ಚಾಕುವಿನಿಂದ ಅನೇಕ ಬಾರಿ ಚ್ಚುಚ್ಚಿ, ಇರಿದು ಕೊಲೆ ಮಾಡಿದ್ದರು. ಇದನ್ನೂ ಓದಿ: ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ