ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಕೀವ್: ಮನುಷ್ಯನಿಗೆ ಮಾನವೀಯತೆಯ ಮೌಲ್ಯ ತುಂಬಾ ಮುಖ್ಯ. ಅದಕ್ಕೆ ಉತ್ತಮವಾದ ಉದಾಹರಣೆ ಇಲ್ಲಿದೆ. ರಷ್ಯಾ ಮತ್ತು ಉಕ್ರೇನ್‍ನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು, ಅಲ್ಲಿಂದ ಹೊರಗೆ ಬಂದರೆ ಸಾಕು ಎಂದು ಕಾಯುತ್ತಿರುವ ಜನಗಳ ಮಧ್ಯೆ ಹರ್ಯಾಣ ವೈದ್ಯಕೀಯ ವಿದ್ಯಾರ್ಥಿನಿಯು ಉಕ್ರೇನ್ ಬಿಟ್ಟು ಬರಲು ನಿರಾಕರಿಸಿದ್ದಾಳೆ.

ಹರ್ಯಾಣ ವಿದ್ಯಾರ್ಥಿನಿ ನೇಹಾ ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಕಳೆದ 2 ದಿನಗಳಿಂದ ಉಕ್ರೇನ್ ಪರಿಸ್ಥಿತಿ ಸರಿಯಿಲ್ಲದ ಕಾರಣ ಎಲ್ಲ ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ಕಳುಹಿಸಲಾಗುತ್ತಿದೆ. ನೇಹಾ ಪೇಯಿಂಗ್ ಗೆಸ್ಟ್ ಆಗಿ ಉಕ್ರೇನ್ ನಿವಾಸದಲ್ಲಿ ಉಳಿದುಕೊಂಡಿದ್ದಳು. ಆದರೆ ಮನೆಯ ಮಾಲೀಕ ಯೋಧನಾಗಿದ್ದು, ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಉಕ್ರೇನಿಯನ್ ಸೈನ್ಯಕ್ಕೆ ಸ್ವಯಂಪ್ರೇರಣೆಯಿಂದ ಸೇರಿಕೊಂಡಿದ್ದಾನೆ. ಪರಿಣಾಮ ನೇಹಾಗೆ ತನ್ನ ಮೂರು ಮಕ್ಕಳನ್ನು ನೋಡಿಕೊಳ್ಳಲು ನನ್ನ ಹೆಂಡತಿಗೆ ಸಹಾಯ ಮಾಡು ಎಂದು ಹೇಳಿ ಆತ ಹೋಗಿದ್ದಾನೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಕಟ್ಟ ಕಡೆಯ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆತರುವ ತನಕ ಆಪರೇಷನ್ ನಿಲ್ಲದು: ಆರ್.ಅಶೋಕ್

ನೇಹಾನನ್ನು ತನ್ನ ದೇಶಕ್ಕೆ ಹೋಗುವಂತೆ ಕೇಳಿದಾಗ, ನಾನು ಬದುಕಬಹುದು ಅಥವಾ ಸಾಯಬಹುದು. ನಾನು ಈ ಮಕ್ಕಳನ್ನು ಮತ್ತು ಅವರ ತಾಯಿಯನ್ನು ಇಂತಹ ಪರಿಸ್ಥಿತಿಯಲ್ಲಿ ಬಿಟ್ಟು ಬರುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾಳೆ.

ನಾವು ಹೊರಗೆ ಬಾಂಬ್ ಸ್ಫೋಟಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಆದರೆ ಇಲ್ಲಿಯವರೆಗೆ ನಾವು ಚೆನ್ನಾಗಿಯೇ ಇದ್ದೇವೆ. ನಮಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ನಾನು, ಮಕ್ಕಳು ಮತ್ತು ಮಾಲೀಕನ ಹೆಂಡತಿ ಬಂಕರ್ ನಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದು ತನ್ನ ತಾಯಿಗೆ ಮತ್ತು ಕುಟುಂಬ ಸ್ನೇಹಿತರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಭಾರೀ ಅವಘಡ – ಮಗು ಸೇರಿ ಇಬ್ಬರ ಸಾವು, ಐವರಿಗೆ ಗಾಯ

ಹರಿಯಾಣದ ವಿದ್ಯಾರ್ಥಿನಿ ನೇಹಾ(17) ಒಂದೆರಡು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿದ್ದ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ಕಳೆದ ವರ್ಷ ನೇಹಾ ಉಕ್ರೇನ್‍ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಳು. ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ನೇಹಾಗೆ ಹಾಸ್ಟೆಲ್ ಸೌಕರ್ಯ ಸಿಗದ ಕಾರಣ ಉಕ್ರೇನ್‍ನ ರಾಜಧಾನಿ ಕೀವ್‍ನಲ್ಲಿ ಎಂಜಿನಿಯರ್ ಮನೆಯಲ್ಲಿ ನೆಲೆಸಿದ್ದಾಳೆ.

Comments

Leave a Reply

Your email address will not be published. Required fields are marked *