ಟ್ಯೂಷನ್ ಇಲ್ಲದೆ ಉಡುಪಿಯ ಮೇಧಾ ರಾಜ್ಯಕ್ಕೆ ಸೆಕೆಂಡ್ ರ‍್ಯಾಂಕ್‌

ಉಡುಪಿ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೊರಬಿದ್ದಿದ್ದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದೆ. ಉಡುಪಿಯ ಟಿಎ ಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಧಾ ಎನ್ ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾಳೆ.

ಮಣಿಪಾಲದ ನಿವಾಸಿಗಳಾಗಿರುವ ಡಾ. ನರಸಿಂಹ ಮತ್ತು ಶಶಿಕಲಾ ದಂಪತಿ ಪುತ್ರಿ ಮೇಧಾ ಒಂದು ದಿನನೂ ಟ್ಯೂಷನ್ ಹೋಗಿಲ್ಲ. ಎಕ್ಸ್ಟ್ರಾ ಎಫರ್ಟ್ ಹಾಕಿಲ್ವಂತೆ. ಆದ್ರೂ 624 ಅಂಕಗಳನ್ನು ಗಳಿಸಿದ್ದಾಳೆ. ಅಂದಿನ ಪಾಠ ಅಂದೇ ಓದಿ ಈ ಸಾಧನೆ ಮಾಡಿದ್ದಾಳೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಧಾ, ನನಗೆ ರಿಸಲ್ಟ್ ಗೊತ್ತಾಗುವಾಗ ಶಾಕ್ ಆಯ್ತು. ಖುಷಿಯ ಶಾಕ್ ನಿಂದ ಹೊರ ಬರಲು ಬಹಳ ಸಮಯ ಬೇಕಾಯ್ತು. ಬೆಂಗಳೂರಿನಿಂದ ಕರೆ ಬಂತು. ಆಗ ನನಗೆ ನಂಬಿಕೆಯೇ ಬಂದಿಲ್ಲ. ಆಮೇಲೆ ನಾನೇ ಚೆಕ್ ಮಾಡುವಾಗ ನನಗೆ ಕನ್ಫರ್ಮ್ ಆಯ್ತು. ನಂತ್ರ ಫ್ಯಾಮಿಲಿ ಜೊತೆ ವಿಷಯ ಹಂಚಿಕೊಂಡಿದ್ದೇನೆ. ಎಲ್ಲರೂ ಖುಷಿಪಟ್ಟರು ಅಂತ ಮೇಧಾ ಹೇಳಿದ್ದಾರೆ.

ಎಕ್ಸ್ಟಾ ಆರ್ಡಿನರಿಯಾಗಿ ನಾನು ಓದಿಲ್ಲ. ಪ್ರತೀ ಸಿಂಗಲ್ ಡೇ ನಾನು ಓದಿದ್ದೇನೆ. ಕೊನೆಯ ತನಕ ಯಾವುದನ್ನೂ ಇಟ್ಟುಕೊಂಡಿಲ್ಲ. ಡಿಸೆಂಬರ್ ಲಾಸ್ಟ್ ವೀಕ್ ಗೆ ಎಲ್ಲಾ ಪಾಠಗಳು ಆಗಿದೆ. ಓವರ್ ಲೋಡ್ ಮಾಡಿಕೊಂಡ್ರೆ ಕೊನೆಗೆ ಕಷ್ಟವಾಗುತ್ತದೆ. ಕನ್ಸಿಸ್ಟೆಂಟ್ ಆಗಿ ಓದುತ್ತಾ ಹೋದ್ರೆ ಮಾತ್ರ ಉತ್ತಮ ಮಾರ್ಕ್ ಬರುತ್ತದೆ. ಜೂನ್ ನಲ್ಲಿ ತರಗತಿಗಳು ಆರಂಭವಾಗಿತ್ತು. ಅಂದಿನಿಂದ ಡಿಸೆಂಬರ್ ತನಕ ದಿನಂಪ್ರತಿ ಮಾಡಿದ ಪಾಠಗಳನ್ನು ಓದುತ್ತಿದ್ದೆ, ಅದೇ ಈ ಸಾಧನೆಗೆ ಕಾರಣ ಅಂತ ಹೇಳಿದ್ದಾಳೆ.

ಟಿಎ ಪೈ ಸ್ಕೂಲ್ ನ ಎಲ್ಲಾ ಶಿಕ್ಷಕರು ನನ್ನ ಈ ಸಾಧನೆಗೆ ಕಾರಣ. ಎಲ್ಲಾ ವಿಷಯದ ಶಿಕ್ಷಕರು ಕೂಡಾ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು. ಯಾವ ಸಂಶಯ ಬಂದ್ರೂ ಅದನ್ನು ಕ್ಲೀಯರ್ ಮಾಡುತ್ತಿದ್ದರು. ಕುಟುಂಬದ ಸದಸ್ಯರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಅವರಿಲ್ಲದೆ ನಾನು ಇಲ್ಲ. ನನ್ನ ಕುಟುಂಬವೇ ನನಗೆ ಆಧಾರ ಅಂತ ಅಂದ್ಳು.

ಅಪ್ಪನೂ ಫಸ್ಟ್ ರ‍್ಯಾಂಕ್‌ ನಲ್ಲಿ ಪಾಸಾಗಿದ್ದರು: ಹತ್ತನೇ ಕ್ಲಾಸ್ ತನಕ ಟ್ಯೂಷನ್ ತಗೊಂಡಿಲ್ಲ. ಇನ್ನೂ ಕೋಚಿಂಗ್ ಗೆ ಹೋಗಲ್ಲ. ಸೆಲ್ಫ್ ಸ್ಟಡಿ ಬಗ್ಗೆ ಮಾತ್ರ ನನಗೆ ನಂಬಿಕೆ. ನಾವಾಗಿ ಮನೆಯಲ್ಲಿ ಓದುವುದೇ ಬೆಸ್ಟ್. ನನಗೆ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಇದೆ. ಆದ್ರೆ ಸದ್ಯ ವಿಜ್ಞಾನ ವಿಭಾಗದಲ್ಲೇ ಮುಂದುವರೆಯುವ ಆಲೋಚನೆ ಇದೆ. ಅಪ್ಪ ಎಸ್ ಎಸ್ ಎಲ್ ಸಿ, ಪಿಯುಸಿ, ಎಂಜಿನಿಯರಿಂಗ್ ನಲ್ಲಿ ಫಸ್ಟ್ ರ‍್ಯಾಂಕ್‌. ಅಮೇರಿಕಾದಲ್ಲಿ ಪಿಎಚ್ ಡಿ ಮಾಡಿದ್ದಾರೆ. ಅಲ್ಲೂ ರ‍್ಯಾಂಕ್‌ ಪಡೆದಿದ್ದಾರೆ. ಚಿಕ್ಕಪ್ಪ ಕೂಡಾ ಅಮೇರಿಕಾದಲ್ಲಿ ಟಾಪರ್. ಚಿಕ್ಕಮ್ಮ, ಆಂಟಿ ಕೂಡಾ ಟಾಪರ್‍ಗಳೇ. ಹೀಗಾಗಿ ಎಲ್ಲಾ ಕಡೆಗಳಿಂದಲೂ ನನಗೆ ಸಪೋರ್ಟ್ ಸಿಕ್ಕಿದೆ ಅಂತ ಅಂದಿದ್ದಾಳೆ.

ಇಂಗ್ಲೀಷ್ ನಲ್ಲಿ 99 ಮಾರ್ಕ್ ಬಂದಿದೆ. ಮತ್ತೆಲ್ಲಾ ವಿಭಾಗದಲ್ಲಿ ನೂರು ಅಂಕಗಳು ಬಂದಿದೆ. ಇಂಗ್ಲೀಷ್ ನಲ್ಲಿ ಒಂದು ತಪ್ಪು ಬರೆದಿದ್ದೆ, ಈ ಬಗ್ಗೆ ಏನೂ ಬೇಜಾರಿಲ್ಲ ಅಂತ ಮೇಧಾ ಭಟ್ ಹೇಳಿದ್ದಾಳೆ.

Comments

Leave a Reply

Your email address will not be published. Required fields are marked *