ರಾಷ್ಟ್ರಗೀತೆ ಮುದ್ರಿಸಿದ ಪೇಪರ್ ನಿಂದ ಊಟದ ಪ್ಲೇಟ್ ತಯಾರಿಕೆ

ಮೈಸೂರು: ಜಿಲ್ಲೆಯ ನಂಜನಗೂಡಿನ ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ರಾಷ್ಟ್ರಗೀತೆ ಇರುವ ಪುಸ್ತಕದ ಪೇಪರ್ ನಿಂದ ಊಟದ ಪ್ಲೇಟ್ ತಯಾರಿಕೆ ಮಾಡಿದ್ದಕ್ಕೆ ಆಕ್ಷೇಪ ಕೇಳಿಬಂದಿದೆ.

ಪ್ಲೇಟ್ ಹಿಂಭಾಗದಲ್ಲಿ ರಾಷ್ಟ್ರಗೀತೆಯ ಸಾಲುಗಳು ಮುದ್ರಣ ಮಾಡಿದ್ದು ಸಾರ್ವಜನಿಕ ಸಮಾರಂಭದಲ್ಲಿ ಜನರಿಗೆ ತಿಂಡಿ ಹಂಚಲು ಈ ಪ್ಲೇಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಆರನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಪೇಪರ್‍ನಿಂದ ಪ್ಲೇಟ್ ತಯಾರಿಕೆ ಮಾಡಲಾಗಿದೆ.

ಸಮಾರಂಭದಲ್ಲಿ ಇಂತಹ ಪ್ಲೇಟ್ ನಲ್ಲಿ ತಿಂಡಿ ಹಂಚುವಾಗ ಆಕ್ಷೇಪ ವ್ಯಕ್ತವಾಗಿದೆ. ಆಕ್ಷೇಪ ಬಂದ ತಕ್ಷಣ ಬೇರೆ ಪ್ಲೇಟ್ ಖರೀದಿಸಿ ತಿಂಡಿ ವಿತರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *