#MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದೆ. ಬಿಜೆಪಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಈ ಆರೋಪ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸದಾನಂದಗೌಡರು ಸಿಎಂ ಆಗಿದ್ದಾಗ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು. ಕಚೇರಿಗೆ ಬನ್ನಿ, ಊಟಕ್ಕೆ ಬನ್ನಿ, ನಿಮ್ಮ ರೆಸ್ಯೂಮ್ ಕೊಡಿ, ಫೋಟೋ ಕೊಡಿ ಅಂತ ಕೋಡ್ ವರ್ಡ್‍ನಲ್ಲಿ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಒಬ್ಬ ಸಿಎಂ ಆಗಿದ್ದವರು ಯಾವ ರೀತಿ ವರ್ತನೆ ಮಾಡಬೇಕು ಎನ್ನುವುದು ಗೊತ್ತಿರುತ್ತದೆ. ಬಿಜೆಪಿಯಲ್ಲಿ ಹಲವು ಮಂದಿ ಅವರವರ ಸ್ಟೇಟಸ್‍ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತಾ ಹೇಳೋದು, ನಿಮ್ಮನ್ನು ಅಲ್ಲಿ ನೋಡಿದ್ದೀನಿ ಅಂತಾ ಹೇಳೋದು ಎಷ್ಟು ಸರಿ ಅಲ್ಲವೇ? ಕಾಲ್ ಮಾಡೋದು, ನನ್ನ ಮೈ ಮೇಲೆ ಬರೋದು, ಮೈ ಟಚ್ ಮಾಡಿ ಕೂರೋದು, ಇದೆಲ್ಲ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ಮಾಧುರಿ ಅವರ ಆರೋಪದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸದಾನಂದಗೌಡರು, ಆಕೆ ಯಾರು ಅಂತ ಗೊತ್ತಿಲ್ಲ. ಆಕೆಗೆ ನಮ್ಮ ಪಕ್ಷದಲ್ಲಿ ಜವಾಬ್ದಾರಿ ನೀಡಿರಬಹುದು. ಆ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದೆಲ್ಲ ಏನು ಇಲ್ಲ ಅಂತ ಪಬ್ಲಿಕ್‍ ಟಿವಿಗೆ ಫೋನ್ ಮೂಲಕ ತಿಳಿಸಿದರು.

ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಹಿಳೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *