ಬಿಎಸ್‍ವೈರನ್ನ ಬಿಜೆಪಿ ನಾಯಕರು ಹೆದರಿಸಿ ಪ್ರಚಾರ ಮಾಡಿಸುತ್ತಿದ್ದಾರೆ: ಎಂ.ಬಿ ಪಾಟೀಲ್

M.B PATIL

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ (BS Yediyurappa) ಬಿಜೆಪಿ ನಾಯಕರು ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಹೊಸ ಬಾಂಬ್ ಸಿಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ (BJP) ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸಲು ಲಿಂಗಾಯತರನ್ನೇ ಬಳಸುತ್ತಿದ್ದಾರೆ. ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲೂ ಬಲಿಯಾದರು, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ. ಬಿಜೆಪಿ ಸವದಿಗೆ ಟಿಕೆಟ್ ಭರವಸೆ ಕೊಟ್ಟಿತ್ತು. ಆದರೂ ಅವರಿಗೆ ಟಿಕೆಟ್‍ನ್ನೇ ಕೊಡಲಿಲ್ಲ, ಟಿಕೆಟ್ ತಪ್ಪಿಸಿದರು. ಲಿಂಗಾಯತ ಸಮುದಾಯವನ್ನು ಉಪಯೋಗಿಸಿ ಕೈಬಿಟ್ಟಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾ ವರ್ಕೌಟ್ ಆಗಿದೆ. ಹಾಗಾಗಿ ಈ ಬಾರಿ ಲಿಂಗಾಯತರು ಕಾಂಗ್ರೆಸ್ ಪರ ಬರುತ್ತಾರೆ. ಮರಳಿ ಮನೆಗೆ ಅಂತ ವಾಪಸ್ಸು ಬರುತ್ತಾರೆ. ಬಿಜೆಪಿ ಸರ್ಕಾರ ಬರಲ್ಲ ಅಂತ ಗೊತ್ತಾಗಿದೆ. ಆದ್ದರಿಂದ ಮೋದಿ, ಅಮಿತ್ ಶಾ ರಾಜ್ಯದಲ್ಲಿ ಮನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದರು. ಯಡಿಯೂರಪ್ಪನವರಿಗೆ ಅನಾರೋಗ್ಯವೇನಾದ್ರೂ ಇತ್ತಾ? ಇವತ್ತಿಗೂ ದಷ್ಟಪುಷ್ಟವಾಗಿಯೇ ಇದ್ದಾರೆ. ಆದರೆ ಯಡಿಯೂರಪ್ಪ ತೆಗೆದ ಅಜೆಂಡಾ ಅವರದ್ದು ಬೇರೆ ಇತ್ತು. ಕುಮಾರಸ್ವಾಮಿಯವರ ಯಾಕೆ ಅಂತ ಹೇಳಿದ್ದಾರೆ. ಸುದೀರ್ಘವಾಗಿ ಮಾತನಾಡಿದ್ದಾರೆ. ನಾವೆಲ್ಲಾ ತಿರುಗಿ ಬೀಳ್ತಾರೆ ಅನ್ನೋ ಕಾರಣವಾಗಿದೆ. ಹಾಗಾಗಿ ಬೊಮ್ಮಾಯಿಯವರಿಗೆ ಸಿಎಂ ಮಾಡಿದರು. ಇಲ್ಲವಾದರೆ ಅವರ ಉದ್ದೇಶವೇ ಬೇರೆ ಇತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿಯದ್ದು ಬರೀ ಬುರುಡೇ ಭಾಷಣ, ಸರ್ಪ ಯಾವಾಗಲೂ ಡೇಂಜರ್: ಹೆಚ್‌ಡಿಕೆ ವಾಗ್ದಾಳಿ

ಜಗದೀಶ್ ಶೆಟ್ಟರ್‍ಗೆ ಇನ್ನೂ 66 ವರ್ಷ. ಆದರೆ 75 ಆದ ತಿಪ್ಪಾರೆಡ್ಡಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಸುರೇಶ್ ಕುಮಾರ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ ಯಾಕೆ ಶೆಟ್ಟರ್, ಸವದಿಗೆ ಟಿಕೆಟ್ ತಪ್ಪಿಸಿದ್ದು? ಶೆಟ್ಟರ್ ಸಿಎಂ ಆಗಿದ್ದಂತವರು. ಬೊಮ್ಮಾಯಿ ಸರ್ಕಾರದಲ್ಲಿ ಶೆಟ್ಟರ್ ಸಚಿವರಾಗಲಿಲ್ಲ. ಸಚಿವ ಸ್ಥಾನವನ್ನು ಅವರು ತ್ಯಾಗ ಮಾಡಿದರು. ಲಿಂಗಾಯತ ಸಮುದಾಯಕ್ಕೆ ಎಲ್ಲವೂ ಅರ್ಥವಾಗಿದೆ. ಬಿಜೆಪಿ ಹಿಡನ್ ಅಜೆಂಡಾ ಗೊತ್ತಾಗಿದೆ. ಲಿಂಗಾಯತರ ವಿಚಾರದಲ್ಲಿ ಗಾಬರಿಗೊಂಡಿದ್ದಾರೆ. 40% ಭ್ರಷ್ಟಾಚಾರದಲ್ಲೂ ಆತಂಕಗೊಂಡಿದ್ದಾರೆ. ಅದಕ್ಕೆ ಮೋದಿ, ಅಮಿತ್ ಶಾ ಶಾಶ್ವತವಾಗಿ ಮಾಡಿದ್ದಾರೆ. ಅವರನ್ನೇ ಸಿಎಂ ಮಾಡೋ ಮಟ್ಟಕ್ಕೆ ಇಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್