ಇಂದು ತೆರೆಗೆ ಅಪ್ಪಳಿಸಲಿದೆ ಮಾಸ್ತಿಗುಡಿ

ಬೆಂಗಳೂರು: ಬಹು ನಿರೀಕ್ಷಿತ ಮಾಸ್ತಿಗುಡಿ ಸಿನಿಮಾ ಇವತ್ತು ತೆರೆಗೆ ಅಪ್ಪಳಿಸುತ್ತಿದೆ. ನಟ ದುನಿಯಾ ವಿಜಿ ಅಭಿಯನದ ಚಿತ್ರದಲ್ಲಿ ಕೀರ್ತಿ ಕರಬಂಧ ಮತ್ತು ಅಮೂಲ್ಯ ನಟಿಸುತ್ತಿದ್ದಾರೆ.

ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು. ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಹುಬಲಿ ಹೊಡೆತ ಮಾಸ್ತಿಗುಡಿಗೂ ಬಿದ್ದಿದೆ. ಬಾಹುಬಲಿ ಶೋದಿಂದಾಗಿ ಮಾಸ್ತಿಗುಡಿಗೆ ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳಲ್ಲಿ ಜಾಗ ಸಿಗ್ತಿಲ್ಲ. ಈ ಬಗ್ಗೆ ಫಿಲ್ಮ್ ಚೇಂಬರ್‍ಗೂ ದೂರು ನೀಡಲಾಗಿದೆ.

ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಾಸ್ತಿಗುಡಿ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ನೋಡಲು ಉದಯ್ ತಂದೆ ವೆಂಕಟೇಶ್, ತಾಯಿ ಕೌಸಲ್ಯ ಮತ್ತು ಉದಯ್ ಸಹೋದರ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಉದಯ್ ತಂದೆ-ತಾಯಿ, ಉದಯ್ ಅಭಿನಯದ ಕೊನೆ ಸಿನಿಮಾ ಇದು. ಹಾಗಾಗಿ ಚಿತ್ರಮಂದಿರದಲ್ಲಿ ನೋಡೋಕೆ ಬಂದ್ವಿ ಅಂದ್ರು. ಇನ್ನು ಕ್ಲೈಮ್ಯಾಕ್ಸ್ ದುರಂತದಲ್ಲಿ ಬಲಿಯಾದ ಅನಿಲ್ ಮತ್ತು ವಿಜಯ್ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ ಮಾಸ್ತಿ ಚಿತ್ರತಂಡ.

ಇದನ್ನೂ ಓದಿ: ಯಾಕೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ: ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದುನಿಯಾ ವಿಜಿ ಆಕ್ರೋಶ

 

 

Comments

Leave a Reply

Your email address will not be published. Required fields are marked *