ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಎಂದು ಹೇಳಲಾಗುತ್ತಿದೆ. ಪುಣೆಯ ಅಮೋಲ್ ಕಾಳೆಗೆ ಗೌರಿಯವರನ್ನು ಹತ್ಯೆಗೈಯಲು ಸಂಘಟನೆಯೊಂದು ಸುಪಾರಿ ನೀಡಿತ್ತು ಎಂಬ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ವಾಗ್ಮೋರೆ ಓರ್ವ ಧರ್ಮ ರಕ್ಷಕ – ಫೇಸ್ಬುಕ್ನಲ್ಲಿ ಪೋಸ್ಟ್ ಹಾಕೊಂಡ ಶ್ರೀರಾಮ ಸೇನೆ ಸಂಚಾಲಕ
ಸಂಘಟನೆ ನೀಡಿದ್ದ ಕೆಲಸವನ್ನು ನಿರ್ವಹಿಸಲು ಅಮೋಲ್ ಕಾಳೆ ಒಂದು ವರ್ಷದಿಂದ ಸ್ಕೆಚ್ ಹಾಕಿದ್ದನು. ಹತ್ಯೆಗೂ ಒಂದು ವಾರ ಮುನ್ನವೇ ಬೆಂಗಳೂರಿಗೆ ಬಂದಿದ್ದ ಅಮೋಲ್ ಕಾಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಎರಡು ತಿಂಗಳ ಹಿಂದೆ ಬಂಧಿತನಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನೇ ನಾಯಂಡಹಳ್ಳಿ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!
ಬೆಂಗಳೂರಿಗೆ ಬಂದಿದ್ದ ಅಮೋಲ್ ಕಾಳೆ ಹಂತಕರ ಟೀಂಗಾಗಿ ಹುಡುಕಾಟ ನಡೆಸಿದ್ದನು. ಈ ವೇಳೆ ಅಮೋಲ್ ಕಾಳೆಗೆ ಸಿಕ್ಕಿದ್ದು, ಬರೋಬ್ಬರಿ 9 ಜನ. ಈ ಎಲ್ಲರಲ್ಲಿ ಗೌರಿಯವರನ್ನು ಕೊಲ್ಲಲು ನೇಮಕವಾದವನೇ ಸಿಂಧಗಿಯ ಪರಶುರಾಮ್ ವಾಗ್ಮೋರೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್ಐಟಿಗೆ ಅನುಮಾನ ಮೂಡಿದ್ದು ಹೇಗೆ?
ಕೊಲೆಗೂ ಎರಡು ದಿನ ಮುನ್ನ ಅಂದರೆ ಸೆ.3ರಂದು ಪರಶುರಾಮ್ ಬೆಂಗಳೂರಿಗೆ ಬಂದಿದ್ದು, ಸೆ.4ರಂದು ಗೌರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದ್ರೆ ಸರಿಯಾದ ಸಮಯ, ಸ್ಥಳ ನಿಗದಿಯಾಗದ ಹಿನ್ನೆಲೆಯಲ್ಲಿ ಪ್ಲಾನ್ ಫೇಲ್ ಆಗಿತ್ತು. ಸೆ.5ರಂದು ಹಂತಕರು ಪ್ಲಾನ್ ಮಾಡಿದ್ದಂತೆ ಗೌರಿಯವರನ್ನು ಕೊಂದು ಹಾಕಿದ್ದರು. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ
https://www.youtube.com/watch?v=Muzh1bCrCp8
https://www.youtube.com/watch?v=1Ik_Z5XZXfY

Leave a Reply