ವಿನಯ್ ಗುರೂಜಿ ಹುಟ್ಟುಹಬ್ಬ – ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಾಸ್ಟರ್ ಆನಂದ್

ಬೆಂಗಳೂರು: ಕಲಿಯುಗ ಅವಧೂತ ವಿನಯ್ ಗುರೂಜಿ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸಂದೀಪ್ ಸೇವಾ ನಿಲಯದ ಮಕ್ಕಳ ಜೊತೆ ಮಾಸ್ಟರ್ ಆನಂದ್ ಹುಟ್ಟುಹಬ್ಬ ಆಚರಿಸಿದ್ದಾರೆ.

ಬೆಂಗಳೂರಿನ ಕಸ್ತೂರಿ ಬಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಂಧ ಮತ್ತು ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಅನ್ನದಾನ ಮಾಡುವ ಮೂಲಕ ಸರಳ ಹಾಗೂ ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು. ಇದೇ ವೇಳೆ ನಟ ಮಾಸ್ಟರ್ ಆನಂದ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು.

ಈ ವೇಳೆ ಮಾತನಾಡಿದ ಮಾಸ್ಟರ್ ಆನಂದ್ ಅವರು, ವಿಜಯ್ ಗುರೂಜಿ ಅವರ ಹುಟ್ಟುಹಬ್ಬ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಬಡ ಮಕ್ಕಳಿಗಾಗಿ ಇಲ್ಲಿ ಕೇಕ್ ಕಟ್ ಮಾಡಿ ಅನ್ನದಾನ ಆಯೋಜಿಸಿದ್ದೇವೆ. ಸರಳವಾಗಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿ ಎಂಬುದು ಗುರುಗಳ ಸಂದೇಶ ಎಂದರು.

ಭಕ್ತಾಧಿಗಳು ತಮ್ಮ ಖುಷಿಗಾಗಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಗುರುಗಳು ಇದನ್ನು ತಡೆದಿದ್ದರು. ಆದರೂ ಭಕ್ತರು ಇದೇ ರೀತಿ ಮಾಡುತ್ತಿದ್ದರು. ಹಾಗಾಗಿ ಗುರೂಜಿ ಉಡುಗೊರೆಗಾಗಿ ಹಣವನ್ನು ವ್ಯರ್ಥ ಮಾಡುವ ಮೊದಲು ಸದ್ವಿನಿಯೋಗ ಮಾಡಿ. ಹಣದಿಂದ ಯಾರಿಗೆ ಏನು ಅವಕಾಶ ಇದೆಯೋ ಅದನ್ನು ಪೂರೈಸಿ ಅದು ನನಗೆ ಸಲ್ಲುತ್ತೆ ಎಂದು ಹೇಳುತ್ತಾರೆ ಎಂದು ಆನಂದ್ ಹೇಳಿದರು.

Comments

Leave a Reply

Your email address will not be published. Required fields are marked *