ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಗ್ನಿ ಅವಘಡ- ಅಪಾಯದಲ್ಲಿ ವನ್ಯಜೀವಿಗಳು

fire 02

ಜೈಪುರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ವನ್ಯಜೀವಿಗಳು ಅಪಾಯಕ್ಕೆ ಸಿಲುಕಿವೆ.

ಎರಡು ದಿನಗಳ ಹಿಂದೆ ನಗರದ ಸಮೀಪದಲ್ಲೇ ಇರುವ ಬುರಾ ಸಿಂಗ್ ಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಗಾಳಿಯ ರಭಸಕ್ಕೆ ಕಾಡಿಗೂ ಹೊತ್ತಿಕೊಂಡಿದೆ. ಕಾಡಿನ ಗುಡ್ಡಗಾಡು ಪ್ರದೇಶಕ್ಕೆ ಬೆಂಕಿ ವ್ಯಾಪಿಸಿರುವುದರಿಂದ ಅಗ್ನಿಶಾಮಕ ದಳ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಅರಣ್ಯಾಧಿಕಾರಿಗಳು ಹಸಿರು ಎಲೆಗಳಿಂದ ಪ್ರದೇಶವನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ

FIRE

ಬೆಂಕಿಯ ಅಗಾಧತೆ ನೋಡಿ ಅಕ್ಬರ್‌ಪುರ, ಸದರ್ ಮತ್ತು ಅಲ್ವಾರ್ ಬಫರ್ ವಲಯಗಳಿಂದ 200 ಮಂದಿ ಹೆಚ್ಚುವರಿ ಅರಣು ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಇಲ್ಲಿನ ವಿಪರೀತ ಗಾಳಿ ಪರಿಸ್ಥಿತಿಯು ಅರಣ್ಯಾಧಿಕಾರಿಗಳ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ. ಜೊತೆಗೆ ಎಸ್‌ಟಿ-17 ಎಂಬ ಹೆಸರಿನ ಹೆಣ್ಣು ಹುಲಿಯ ಭೀತಿಯಿಂದ ಅರಣ್ಯಾಧಿಕಾರಿಗಳು ಮುಂದೆ ಸಾಗಲು ಹಿಂದೇಟು ಹಾಕುತ್ತಿದ್ದಾರೆ. ಇದು ಬೆಂಕಿ ವ್ಯಾಪಿಸಲು ಕಾರಣವಾಗಿದ್ದು ಅರಣ್ಯ ಇಲಾಖೆ ಮಿಲಿಟರಿ ಸೇನಾ ಸಹಾಯ ಕೋರಿದೆ. ಇದನ್ನೂ ಓದಿ: ಪ್ರಾದೇಶಿಕ ಅರಣ್ಯಾಧಿಕಾರಿಗಳ ಎರಡು ಮನೆಗಳ ಮೇಲೆ ಎಸಿಬಿ ದಾಳಿ 

ಅರಣ್ಯಾಧಿಕಾರಿಗಳು ಬೆಂಕಿನಂದಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೇನಾ ಸಹಾಯ ಕೋರಿದೆ. ಇಂದು ಸೇನಾ ದಳ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದ್ದು, 2 ಹೆಲಿಕಾಪ್ಟರ್‌ಗಳು ಹೈಡ್ರಾಲಿಕ್ ವ್ಯವಸ್ಥೆಯನ್ನು ಬಳಸಿ ನೀರು ಹರಡಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ.

 

Comments

Leave a Reply

Your email address will not be published. Required fields are marked *