ಮೈಸೂರು: ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಬಿದ್ದು, ಒಂದೇ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಕಮರಹಳ್ಳಿ ಗ್ರಾಮದ ಬಳಿ ನಡೆದಿದೆ.
ಸೋಮವಾರ 11.30 ಕ್ಕೆ ನಾಲೆಯ ಏರಿಯ ಮೇಲೆ ಮಾರುತಿ ವ್ಯಾನ್ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೆಟ್ಟದಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು, ನಾಲೆಯ ಏರಿ ಮೇಲೆ ತೆರಳುತ್ತಿದ್ದ ಮಾರುತಿ ವ್ಯಾನ್ ಯಾರಿಗೆ ಸೇರಿದ್ದು ಎಂಬ ಮಾಹಿತಿ ಕಲೆ ಹಾಕಿದ್ದಾರೆ.

ಮೃತಪಟ್ಟವರು ಮೂಲತಃ ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದವರಾಗಿದ್ದು, ಪಳನಿಸ್ವಾಮಿ, ಪತ್ನಿ ಸಂಜು, ಪುತ್ರ ನಿಖಿತ್ ಮತ್ತು ಪುತ್ರಿ ಪೂರ್ಣಿಮಾ ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply