ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರು ಭಾವುಕರಾಗುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಈ ವಿಡಿಯೋದಲ್ಲಿ ಅವರ ಮೇಲೆ ಇಬ್ಬನಿ ಬೀಳುತ್ತಿದ್ದು, ಕಾಶ್ಮೀರ್ ಎಂದು ಹೇಳಿ ಅಲ್ಲಿ ನಿಂತು ಹಾಯ್ ಮಾಡಿದ್ದಾರೆ.

ಈ ವಿಡಿಯೋವನ್ನು ಗುರು ಅವರ ತಮ್ಮ, ಗೆಳೆಯರು ಹಾಗೂ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಇದೀಗ ಅವರ ಗೆಳೆಯರು ಹಾಗೂ ಕುಟುಂಬದವರು ಈ ವಿಡಿಯೋವನ್ನು ನೋಡುತ್ತಾ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿ ಇರಲಿ ಎಂದು ಮಗನಿಗೆ ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕೋಳಮ್ಮ ಹೇಳುತ್ತಾ ಅವರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

https://www.youtube.com/watch?v=lavakLJVgvg&feature=youtu.be

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *