ಅವರ ಆಸೆ ಪೂರೈಸಬೇಕು, ನಾನು ಸೈನ್ಯಕ್ಕೆ ಸೇರಬೇಕು: ಗುರು ಪತ್ನಿ ಕಲಾವತಿ

– ಎಂ.ಎ ಮಾಡು ಎಂದು ಕಾಲೇಜಿಗೆ ಸೇರಿಸಿದ್ದರು
– ಲೆಕ್ಚರರ್ ಆಗಬೇಕೆಂಬ ಆಸೆ ಇತ್ತು

ಮಂಡ್ಯ: ಹುತಾತ್ಮ ಗುರು ಅವರನ್ನು ಮರೆಯಲಾಗದೇ ತಾಯಿ, ಸಹೋದರರು ಹಾಗೂ ತಂದೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಪತ್ನಿ ಕಲಾವತಿ ನನಗೂ ಸೇನೆಗೆ ಸೇರಬೇಕು ಅನ್ನಿಸುತ್ತಿದೆ. ಈ ಮೂಲಕ ನಾನು ಅವರ ಆಸೆ ಪೂರೈಸಬೇಕು ಎಂದು ಹೇಳಿದ್ದಾರೆ.

ಹುತಾತ್ಮ ಗುರು ಅವರಿಗಾಗಿ ಮೂರು ದಿನಗಳಿಂದ ಅತ್ತು ಅತ್ತು ಸುತ್ತಾಗಿ ಅಸ್ವಸ್ಥರಾಗಿರೋ ಕಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮೊದಲು ನನ್ನ ಪತಿಗಾಗಿ ಬಂದ ಜನರನ್ನು ನೋಡಿ ಕಣ್ಣೀರು ಬಂದಿದ್ದು, ಇನ್ನಷ್ಟೂ ದಿನ ಇದ್ದಿದ್ದರೆ ಅವರು ದೇಶ ಸೇವೆ ಮಾಡುತ್ತಿದ್ದರು. ನಾನು ಕೇವಲ ನನ್ನ ಪತಿಗೆ ಮಾತ್ರ ಸೆಲ್ಯೂಟ್ ಹೊಡೆಯಲಿಲ್ಲ. ಇಡೀ ಸೈನಿಕರಿಗೆ ಒಳ್ಳೆಯದಾಗಲಿದೆ ಎಂದು ಸೆಲ್ಯೂಟ್ ಹೊಡೆದೆ ಎಂದು ಹೇಳಿದ್ದರು.

ಎಂ.ಎ ಮಾಡಲು ಸೇರಿಸಿದ್ದರು:
ಆಸ್ಪತ್ರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನನ್ನು ನನ್ನ ಪತಿಯೇ ಇಷ್ಟಪಟ್ಟು ಓದಲು ಸೇರಿಸಿದ್ದರು. ನೀನು ಮನೆಯಲ್ಲಿಯೇ ಇದ್ದರೆ ಸುಮ್ಮನೆ ಏನೇನೋ ಯೋಚನೆ ಮಾಡುತ್ತೀಯಾ ಎಂದು ಕಾಲೇಜಿಗೆ ಸೇರಿಸಿದ್ದರು. ನನಗೆ ಲೆಕ್ಚರ್ ಆಗಬೇಕೆಂಬ ಆಸೆ ಇತ್ತು. ನನ್ನ ಪತಿ, ನೀನು ಏನು ಓದುತ್ತೀಯಾ ಓದು, ಎಷ್ಟೆ ಖರ್ಚಾದರೂ ನಾನು ಓದಿಸುತ್ತೀನಿ ಎಂದು ಹೇಳಿದ್ದರು. ನನ್ನ ಪತಿ ಇನ್ನೂ ಹತ್ತು ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತೀನಿ ಎಂದು ಹೇಳುತ್ತಿದ್ದರು. ಆದ್ದರಿಂದ ಈಗ ನನಗೆ ಅವರ ಆಸೆ ಪೂರೈಸಬೇಕು ಅನ್ನಿಸುತ್ತಿದೆ. ಅದಕ್ಕೆ ನಾನು ಸೈನ್ಯಕ್ಕೆ ಸೇರಬೇಕು ಎಂದುಕೊಳ್ಳುತ್ತಿದ್ದೀನಿ. ಅವರೇ ನನ್ನ ಮನಸ್ಸಿನಿಂದ ಹೇಳಿಸಿರಬಹುದು ಎನ್ನಿಸುತ್ತಿದೆ ಎಂದು ಕಲಾವತಿ ಹೇಳಿದ್ದಾರೆ.

ಯೋಧರ ಸಾವನ್ನು ಸಂಭ್ರಮಿಸುವವರಿಗೆ ದೇಶಪ್ರೇಮವಿಲ್ಲ. ಯೋಧರ ಬಲಿದಾನವನ್ನು ಹೊಗಳುವುದನ್ನು ಬಿಟ್ಟು ಸಂತೋಷ ಪಡುತ್ತಿದ್ದಾರೆ. ಅವರು ಉದ್ಧಾರ ಆಗೋದು ಬೇಡ, ಹಾಳಾಗಿ ಹೋಗಲಿ. ಇಡೀ ದೇಶವೇ ದುಖಃದಲ್ಲಿದೆ. ಅವರಿಗೆ ಸಂತೋಷ ಪಡಲು ಹೇಗಾದರೂ ಮನಸ್ಸು ಬಂತು ಎಂದು ದೇಶದ್ರೋಹಿಗಳ ವಿರುದ್ಧ ಕಲಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=Txtf_Yj8kw0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *