ಸಾವಿನಲ್ಲೂ ಒಂದಾದ ದಂಪತಿ

ಗದಗ: ಹೃದಯಾಘಾತದಲ್ಲಿ ಪತಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಪತ್ನಿಯೂ ದುಃಖಿತಳಾಗಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದಲ್ಲಿ ನಡೆದಿದೆ.

ಈರಪ್ಪ ಹಟ್ಟಿ (53) ಹಾಗೂ ರೇಣವ್ವ (45) ಮೃತ ದಂಪತಿ. ಪತಿ ಈರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ವಿಷಯ ಪತ್ನಿ ರೇಣವ್ವಗೆ ತಿಳಿಯುತ್ತಿದ್ದಂತೆ ದುಃಖಿತಳಾಗಿ ಅತ್ತು ಸುಸ್ತಾಗಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾರೆ. ದಂಪತಿ ತುಂಬಾ ಅನೂನ್ಯವಾಗಿದ್ದು, ಊರಲ್ಲಿ ಎಲ್ಲರ ಜೊತೆಯೂ ಮಾತನಾಡಿಕೊಂಡು ಚೆನ್ನಾಗಿದ್ದರು. ಆದರೆ ಈ ದಂಪತಿ ಸಾವಿನಲ್ಲೂ ಒಂದಾಗಿರುವುದು ಸ್ಥಳೀಯರ ದುಃಖಕ್ಕೆ ಕಾರಣವಾಗಿದೆ.

ಪತಿ-ಪತ್ನಿಯರಿಬ್ಬರನ್ನು ಅಕ್ಕಪಕ್ಕ ಕೂಡಿಸಿ ಅಂತ್ಯಕ್ತಿಯೆಗೆ ಮೊದಲು ಪೂಜೆ ಸಲ್ಲಿಸಲಾಯಿತು. ಕೈಹಿಡಿದು ಸಪ್ತಪದಿ ತುಳಿದು, ಬಾಳಿ ಬದುಕಿದ ಜೀವಗಳು ಸಾವಿನಲ್ಲೂ ಒಂದಾಗಿದ್ದು ನಿಜಕ್ಕೂ ಮನಕಲಕುವಂತಿದೆ. ದಂಪತಿಯ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಒಂದೆ ಕಡೆ ಒಟ್ಟಾಗಿ ಅಂತ್ಯಕ್ರಿಯೆ ಕೂಡ ಮಾಡಲಾಯಿತು.

Comments

Leave a Reply

Your email address will not be published. Required fields are marked *