ಮದ್ವೆಯಾಗಿ 17 ದಿನಕ್ಕೆ ಮಗುವಿಗೆ ಜನ್ಮ- 11 ಜನರ ಮೇಲೆ ಆರೋಪ

– ತಂದೆ, ಪತಿ, ಸಂಬಂಧಿ ಸೇರಿ ಗ್ರಾಮದ 11 ಮಂದಿಯಿಂದ ಕಿರುಕುಳ

ಲಕ್ನೋ: ಮದುವೆಯಾದ 17 ದಿನದಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಇದಕ್ಕೆ ತಂದೆ ಮತ್ತು ಸಹೋದರ ಸೇರಿದಂತೆ 11 ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಂಥಾರಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಎಸ್‍ಪಿ ಮತ್ತು ಐಜಿಗೆ ಪತ್ರ ಬರೆದಿದ್ದರು. ಸದ್ಯಕ್ಕೆ ಎಸ್‍ಪಿ ಸೂಚನೆ ಮೇರೆಗೆ ಈ ಘಟನೆ ಕುರಿತು ಮಹಿಳಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?
ಮಹಿಳೆ ಉನ್ನಾವ್ ಸದರ್ ಕೊಟ್ವಾಲಿ ಗ್ರಾಮದ ಯುವಕನ ಜೊತೆ ಏಪ್ರಿಲ್ 19 2019ರ ರಂದು ಮದುವೆಯಾಗಿದ್ದರು. ವಿವಾಹವಾದ 17 ದಿನಗಳ ನಂತರ ಮೇ 6 ರಂದು ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆಗ ಪತಿಯ ಮನೆಯವರು ಮಗುವಿನ ಜನನದ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ, ತಂದೆ, ಪತಿ ಮತ್ತು ಸೋದರಸಂಬಂಧಿ ಸೇರಿದಂತೆ ಗ್ರಾಮದ 11 ಮಾಜಿ ಮುಖ್ಯಸ್ಥರು 13ನೇ ವಯಸ್ಸಿನಿಂದ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆಗೆ ಈ ಕುರಿತು ಡಿಸೆಂಬರ್ 28 ರಂದು ಎಸ್‍ಪಿಯನ್ನು ಭೇಟಿಯಾಗಿ ತನಿಖೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಮಹಿಳಾ ಪೊಲೀಸ್ ಠಾಣೆ ಉಸ್ತುವಾರಿ ಸುನೀತಾ ಚೌರಾಸಿಯಾ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಎಸ್‍ಪಿ ಅವರ ಸೂಚನೆಯ ಮೇರೆಗೆ ಮರುದಿನ ಡಿಸೆಂಬರ್ 29 ರಂದು ಮಹಿಳಾ ಪೊಲೀಸ್ ಠಾಣೆಗೆ ಮಹಿಳೆ ವರದಿಯನ್ನು ಸಲ್ಲಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಮಹಿಳಾ ಪೊಲೀಸ್ ಠಾಣೆ ತನಿಖೆಯನ್ನು ಆರಂಭಿಸಿದೆ.

Comments

Leave a Reply

Your email address will not be published. Required fields are marked *