ಪ್ರಸಾದ ವಿಷ ದುರಂತ – ತಬ್ಬಲಿಯಾದ ಮೂವರು ಮಕ್ಕಳಿಗೆ ಆಳ್ವಾಸ್ ಆಸರೆ

ಮಂಗಳೂರು: ಸುಳ್ವಾಡಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದ ದುರಂತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಮೂರು ಮಕ್ಕಳಿಗೆ ಆಳ್ವಾಸ್ ಸಂಸ್ಥೆ ಆಸರೆಯಾಗಲು ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂವರು ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದು, ಮೂವರು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿದೆ. ಅಷ್ಟೇ ಅಲ್ಲದೇ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದೆ. ಇದನ್ನೂ ಓದಿ: ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

ಮಾಧ್ಯಮಗಳಲ್ಲಿ ಸುಳ್ವಾಡಿ ದೇವಾಲಯ ವಿಷಪ್ರಸಾದದ ಸುದ್ದಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿದ ಆಳ್ವಾಸ್ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸ್ಪಂದಿಸಿದ್ದು, ದುರಂತದಿಂದ ಅನಾಥರಾಗಿರುವ ಮೂವರು ಮಕ್ಕಳನ್ನು ದತ್ತು ಪಡೆಯುತ್ತೇವೆ. ಅವರ ತಂದೆ-ತಾಯಿ ಜಾಗದಲ್ಲಿ ನಿಂತು ಅವರು ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ. ಈಗ ಅವರು ಕಲಿಯುತ್ತಿದ್ದ ಸ್ಥಳದಿಂದ ನಮ್ಮ ಸಂಸ್ಥೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತೇವೆ. ಬಳಿಕ ಅವರ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಪಡೆಯುವವರೆಗೂ ನಾವು ಮೂವರ ಮಕ್ಕಳ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಯಲದಲ್ಲಿ ವಿಷಪ್ರಸಾದ ದುರಂತಕ್ಕೆ ಕೋಟೆಪುದೆ ಗ್ರಾಮದ ಕೃಷ್ಣ ನಾಯಕ್ ಮೃತಪಟ್ಟಿದ್ದರು. ಆದರೆ ಇಂದು ಅವರು ಪತ್ನಿ ಮೈಲಿಬಾಯಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈಗ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ಮೂವರು ಮಕ್ಕಳು ಅನಾಥರಾಗಿದ್ದಾರೆ. ಕೃಷ್ಣ ನಾಯ್ಕ್ ಮತ್ತು ಮೈಲಿಬಾಯಿ ದಂಪತಿಗೆ ಹೆಣ್ಣು ಮಕ್ಕಳಿಬ್ಬರು ಮತ್ತು ಒಬ್ಬ ಮಗನಿದ್ದಾನೆ. ಇಬ್ಬರು ಹೆಣ್ಣು ಮಕ್ಕಳು ನರ್ಸಿಂಗ್ ಮಾಡುತ್ತಿದ್ದು, ಮಗ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *