ಸತೇಂದ್ರ ಜೈನ್ ಬಳಿಕ‌ ಮನೀಷ್ ಸಿಸೋಡಿಯ ಬಂಧನಕ್ಕೆ ತಯಾರಿ : ಮೋದಿ ವಿರುದ್ಧ ಕೇಜ್ರಿವಾಲ್‌ ಕಿಡಿ

ನವದೆಹಲಿ: ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ಧಾಳಿ ಮಾಡಿದರು.

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಚಿವ ಸತ್ಯಂದ್ರ ಜೈನ್ ಬಂಧನ ಕುರಿತು ಮಾತನಾಡಿದ ಅವರು, ಸಚಿವ ಸತೇಂದ್ರ ಜೈನ್ ಬಂಧನ ಬಳಿಕ ಉಪ ಮುಖಮಂತ್ರಿ ಮನೀಷ್ ಸಿಸೋಡಿಯ ಬಂಧನಕ್ಕೆ ಸುಳ್ಳು ಪ್ರಕರಣಗಳನ್ನು ಸಿದ್ದಪಡಿಸಲಾಗುತ್ತಿದೆ. ಮನೀಶ್ ಸಿಸೋಡಿಯಾ ಅವರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲು ಕೇಂದ್ರವು ಎಲ್ಲ ಏಜೆನ್ಸಿಗಳಿಗೆ ಆದೇಶಿಸಿದೆ. ಮುಂದಿನ ಬಾರಿಯೂ ದೆಹಲಿ ಸಚಿವರನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಹ ನಮಗೆ ಸಿಕ್ಕಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಂದಮ್ಮನ ಎದುರೇ ಆತ್ಯಹತ್ಯೆ ಮಾಡಿಕೊಂಡ ತಾಯಿ – ಎರಡೂವರೆ ಗಂಟೆ ಅಮ್ಮ…ಎಂದು ಕಣ್ಣೀರಿಟ್ಟ ಮಗು

ಬಹಳಷ್ಟು ದಿನಗಳ ಹಿಂದಯೇ ನಾನು ಸತೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯಗಳಿದೆ ಎಂದು ಹೇಳಿದ್ದೆ, ಅದರಂತೆ ಇಡಿ ಅವರನ್ನು ಬಂಧಿಸಿ ಜೂನ್ 9 ವರೆಗೂ ವಶಕ್ಕೆ ಪಡೆದುಕೊಂಡಿದೆ. ಈಗಲೂ ಅದೇ ಮೂಲಗಳು ಡಿಸಿಎಂ ಮನೀಷ್ ಸಿಸೋಡಿಯ ವಿರುದ್ಧವೂ ಸುಳ್ಳು ಪ್ರಕರಣ ಸಿದ್ದವಾಗುತ್ತಿದೆ ಎಂದು ಹೇಳಿವೆ ಎಂದು ಆಕ್ರೋಶ ಹೊರ ಹಾಕಿದರು.

ಒಬ್ಬೊಬ್ಬ ಸಚಿವರನ್ನು ಬಂಧಿಸಲಾಗುತ್ತಿದೆ, ಇದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ನಮ್ಮನ್ನೆಲ್ಲ ಒಂದೇ ಬಾರಿಗೆ ಬಂಧಿಸಿ, ತನಿಖೆ ನಡೆಸಿ, ದಾಳಿ ಮಾಡಿ, ನಂತರ ನಾವು ಕೆಲಸಕ್ಕೆ ಮರಳಬಹುದು. ಏಕೆಂದರೆ ನಮಗೆ ರಾಜಕೀಯ ಅರ್ಥವಾಗುವುದಿಲ್ಲ. ನಾವು ಕೆಲಸ ಮಾಡಲು ಮಾತ್ರ ಬಯಸುತ್ತೇವೆ ಎಂದು ಮೋದಿ ಅವರಿಗೆ ಮನವಿ ಮಾಡಿದರು.

A generation of children will be left behind': Manish Sisodia bats for reopening Delhi schools - Cities News

ಶಿಕ್ಷಣ ಕ್ಷೇತ್ರದಲ್ಲಿ ಮನೀಶ್ ಸಿಸೋಡಿಯಾ ಜಿಯವರ ಕಾರ್ಯದಿಂದ ಪ್ರಯೋಜನ ಪಡೆಯುತ್ತಿರುವ 18 ಲಕ್ಷ ಮಕ್ಕಳನ್ನು ನಾನು ಕೇಳಲು ಬಯಸುತ್ತೇನೆ. ಮನೀಶ್ ಸಿಸೋಡಿಯಾ ಭ್ರಷ್ಟರೇ? ಅವರು ಇಡೀ ವಿಶ್ವದ ಮುಂದೆ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅಂತಹ ವ್ಯಕ್ತಿಯನ್ನು ಬಂಧಿಸಬೇಕೇ ಅಥವಾ ಬಹುಮಾನ ನೀಡಬೇಕೇ? ಪೋಷಕರು ಇದಕ್ಕೆ ಉತ್ತರಿಸಬೇಕು ಎಂದು ಗುಡುಗಿದರು.

ಜೈನ್ ಮತ್ತು ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸುವುದರ ಹಿಂದಿನ ರಾಜಕೀಯದ ಬಗ್ಗೆ ನಮಗೆ ಏನು ತಿಳಿದಿಲ್ಲ. ನಾವು ಇದೇ ರೀತಿ ತನಿಖೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ರೆ ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತೆ. ನಾವು ಜೈಲಿಗೆ ಸೇರಲು ಭಯ ಪಡುತ್ತಿಲ್ಲ. ಈ ಬಾರಿಯೂ ದೆಹಲಿಯ ಜನರು ನಮ್ಮೊಂದಿಗೆ ಇರುತ್ತಾರೆ. ಅವರೇ ನಮಗೆ ಅತ್ಯಂತ ಪ್ರಾಮಾಣಿಕರು ಎಂಬ ಪ್ರಮಾಣಪತ್ರವನ್ನು ನೀಡುತ್ತಾರೆ ಎಂದು ನನಗೆ ನಂಬಿಕೆಯಿದೆ. ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ದೇಶಭಕ್ತಿಯ ಸರ್ಕಾರವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಾನು ಒಬ್ಬ ಸಣ್ಣ ಸೈನಿಕ: ಕಮಲ ಹಿಡಿದ ಹಾರ್ದಿಕ್ ಪಟೇಲ್ 

Delhi Health Minister Satyendar Jain arrested by ED in money laundering case - India News

ನಾವು ಇಂತಹ ಹಲವು ದಾಳಿ ಕಳೆದ ಐದು ವರ್ಷದ ಅವಧಿಯಲ್ಲಿ ನೋಡಿದ್ದೇವೆ. ಆದರೆ ಯಾವುದೇ ತಪ್ಪುಗಳು ಸಿಕ್ಕಿಲ್ಲ. ಸತೇಂದ್ರ ಜೈನ್ ಬಂಧನಕ್ಕೆ ಹಿಮಾಚಲ ಪ್ರದೇಶ ಚುನಾವಣೆ ಕಾರಣ ಎಂದು ಕೆಲವರು ಹೇಳಿದರೇ, ಇನ್ನು ಕೆಲವರು ಪಂಜಾಬ್ ಚುನಾವಣೆ ಫಲಿತಾಂಶದ ಪ್ರತಿಕಾರ ಎಂದರು.

Comments

Leave a Reply

Your email address will not be published. Required fields are marked *